ನವದೆಹಲಿ: ಮುಂದಿನ ವರ್ಷದಿಂದ ಆರಂಭಗೊಂಡು ಪಠ್ಯಗಳ ಜೊತೆ ಕ್ರೀಡೆಯನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಕ್ರೀಡಾ ಸಚಿವಾಲಯದ ಪ್ರಸ್ತಾವನೆ ಬಹುತೇಕ ಜಾರಿಗೆ ಬರುವ ಸಾಧ್ಯತೆ ಇದೆ.
ಸಚಿವಾಲಯದ ಯೋಜನೆಯಂತೆ ಪಠ್ಯಗಳಂತೆ ಕ್ರೀಡೆಯನ್ನು ಒಂದು ಪ್ರತ್ಯೇಕ ವಿಷಯ ಎಂದು ಪರಿಗಣಿಸಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮೇಲೆ ಅಂಕಗಳನ್ನು ನೀಡಲು ಯೋಜಿಸುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು ಅಂಕಗಳನ್ನು ಪಡೆದು ಉತ್ತೀರ್ಣರಾಗಬೇಕಿದೆ ಎಂದು ಸಚಿವಾಲಯ ತಿಳಿಸಿದೆ.
ಈ ನೀತಿ ವಿವಿಧ ಹಂತಗಳಲ್ಲಿ ಜಾರಿಗೆ ತರುವ ಯೋಜನೆ ಇದ್ದು, ಮೊದಲ ಹಂತದಲ್ಲಿ 2018ರಲ್ಲಿ 1ನೇ ತರಗತಿ ಹಾಗೂ ಮುಂದಿನ ವರ್ಷಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಳವಡಿಸಲಾಗುವುದು ಎಂದು ಹೇಳಿದೆ.
ಈ ನೀತಿ ಜಾರಿಗೆ ತರಲು ಯಾವುದೇ ಮಸೂದೆ ಅಂಗೀಕರಿಸುವ ಉದ್ದೇಶವಿಲ್ಲ. ಮಾಧ್ಯಮಿಕ ಶಿಕ್ಷಣದ ಕೇಂದ್ರೀಯ ಮಂಡಳಿ (ಸಿಬಿಎಸ್ಇ) ನಿರ್ಧಾರ ಕೈಗೊಂಡಲ್ಲಿ ರಾಜ್ಯಗಳು ಅದಕ್ಕೆ ಒಪ್ಪಿಗೆ ನೀಡಿ ಜಾರಿಗೆ ತರಬಹುದು ಎಂದು ಕ್ರೀಡಾ ಕಾರ್ಯದರ್ಶಿ ಇಂಜೇತಿ ಶ್ರೀನಿವಾಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.