ನವದೆಹಲಿ: ಮತ ಹಾಕದವರಿಗೆ ಸರ್ಕಾರ ಪ್ರಶ್ನಿಸುವ ಅಥವಾ ದೂಷಿಸುವ ಹಕ್ಕಿರುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಒತ್ತುವರಿ ತೆರವಿಗೆ ದೇಶದಾದ್ಯಂತ ಅನ್ವಯವಾಗುವಂತಹ ಆದೇಶ ಹೊರಡಿಸಬೇಕೆಂದು ’ವಾಯ್ಸ್ ಆಫ್ ಇಂಡಿಯಾ’ ಎನ್ಜಿಒದ ಧನೇಶ್ ಲೆಶ್ ಧನ್ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಸರ್ಕಾರಗಳು ಒತ್ತವರಿ ತೆರವಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಧನೇಶ್ ಆರೋಪಿಸಿದರು. ಈ ವೇಳೆ ಧನೇಶ್ ಅವರಿಗೆ ’ನೀವು ಮತದಾನ ಮಾಡಿದ್ದೀರೋ? ಇಲ್ಲವೋ?’ ಎಂದು ಸಿಜೈ ಜೆ.ಎಸ್ ಖೇಹರ್ ಮತ್ತು ನ್ಯಾಯಮೂರ್ತಿಗಳಾದ ಎನ್.ವಿ. ರಮಣ ಹಾಗೂ ಡಿ.ವೈ. ಚಂದ್ರಚೂಡ ಅವರಿದ್ದ ನೇತೃತ್ವದ ಪೀಠ ಪ್ರಶ್ನಿಸಿತು.
ಈ ವೇಳೆ ಮಾತನಾಡಿದ ಧನೇಶ್ ಅವರು ಸತ್ಯ ಹೇಳುತ್ತೇನೆ. ಜೀವನದಲ್ಲಿ ಎಂದಿಗೂ ನಾನು ಮತದಾನ ಮಾಡಿಲ್ಲ’ ಎಂದು ಹೇಳಿದರು. ನಂತರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಮತ ಹಾಕದವರಿಗೆ ಸರ್ಕಾರವನ್ನು ಪ್ರಶ್ನಿಸುವ ಅಥವಾ ದೂಷಿಸುವ ಹಕ್ಕಿರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ದೇಶದಲ್ಲಿ ಆಗಿರುವ ಎಲ್ಲ ಅತಿಕ್ರಮಣ ತೆರವಿಗೆ ಸಮಗ್ರ ಆದೇಶ ಹೊರಡಿಸಲು ಸಾಧ್ಯವಿಲ್ಲ. ಅಂತಹ ಆದೇಶ ಹೊರಡಿಸಿದ್ದೇ ಆದರೆ, ಅದು ನ್ಯಾಯಾಲಯ ನಿಂದನೆ ಮತ್ತು ಇತರ ಅರ್ಜಿಗಳು ದೊಡ್ಡ ಪ್ರಮಾಣದಲ್ಲಿ ದಾಖಲಾಗುತ್ತವೆ. ಆದ್ದರಿಂದ ಈ ವಿಚಾರವನ್ನು ಆಯಾ ರಾಜ್ಯಗಳ ಹೈಕೋರ್ಟ್ ಗಮನಕ್ಕೆ ತರಬೇಕು ಎಂದು ನ್ಯಾಯಪೀಠವು ಅರ್ಜಿದಾರರಿಗೆ ತಿಳಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.