ಹುಬ್ಬಳ್ಳಿ : ರಾಜ್ಯ ಒಲಿಂಪಿಕ್ ಕ್ರೀಡಾ ಕೂಟದ ಎರಡನೆ ದಿನವಾದ ಇಂದು ಹುಬ್ಬಳ್ಳಿ ನಗರದಲ್ಲಿ ಮಹಿಳೆಯರ ವೈಯಕ್ತಿಕ ಸೈಕ್ಲಿಂಗ್ ಸ್ಪರ್ಧೆ ಜರುಗಿತು.
ವಿಜಯಪುರದ ಕ್ರೀಡಾ ವಸತಿ ಶಾಲೆಯ ಕು. ಆರತಿ ಭಾಟಿ 40ಕಿ,ಮೀ. ಸೈಕ್ಲಿಂಗ್ ಅಂತರವನ್ನು 1 ಗಂಟೆ 11 ನಿಮಿಷ 76 ಮಿಲಿ ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಸ್ಪರ್ಧೆಯಲ್ಲಿ ಮೊದಲಿಗರಾಗಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಎರಡನೇ ಸ್ಥಾನದ ಬೆಳ್ಳಿ ಪದಕನ್ನು ಬಾಗಲಕೋಟೆಯ ಕ್ರೀಡಾ ವಸತಿ ಶಾಲೆಯ ಸೌಮ್ಯ ಅಂತಪುರ, ಈ ಅಂತರವನ್ನು 1 ಗಂಟೆ 11 ನಿಮಿಷ 78 ಮಿಲಿಸೆಕಂಡಗಳಲ್ಲಿ ಪೂರೈಸುವ ಮೂಲಕ ಪಡೆದುಕೊಂಡರು ಹಾಗೂ ವಿಜಯಪುರದ ಕ್ರೀಡಾ ವಸತಿ ಶಾಲೆಯ ರೇಣುಕಾ ದಂಡಿನ ಈ ದೂರವನ್ನು 1 ಗಂಟೆ 11 ನಿಮಿಷ 80 ಮಿಲಿಸೆಕಂಡುಗಳಲ್ಲಿ ಕ್ರಮಿಸುವ ಮೂಲಕ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ಧರಿಸಿಕೊಂಡರು.
ಸೂರ್ಯ ತನ್ನ ಗೂಡಿನಿಂದ ಹೊರ ಬರುವ ಹೊತ್ತಿಗೆ ಹುಬ್ಬಳ್ಳಿ ಗಬ್ಬೂರು ಕ್ರಾಸ್ ಜೈನ ಮಂದಿರದ ಬಳಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 27 ಸ್ಪರ್ಧಾಳುಗಳು ತಮ್ಮ ಸೈಕಲ್ ಏರಿ ಸನ್ನಧ್ದರಾಗಿದ್ದರು.
ಹುಬ್ಬಳ್ಳಿ ನಗರದ ಸಂಚಾರಿ ಸಿಪಿಐ ಸಲೀಂ ಅಲಿಯವರು ಸ್ಪರ್ಧೆಗೆ ಚಾಲನೆ ನೀಡುತ್ತಿದ್ದಂತೆಯೇ ಸ್ಪರ್ಧಿಗಳು ನಿಧಾನವಾಗಿ ಚಲಿಸಿ ನಂತರ ವೇಗವನ್ನು ಮೈಗೂಡಿಸಿಕೊಂಡು ನೋಡನೊಡುತ್ತಿದ್ದಂತೆಯೇ ಶರವೇಗದಲ್ಲಿ ಸೈಕಲ್ ತುಳಿದು ಸ್ಪರ್ಧೆಗೆ ಹುಮ್ಮಸು ತುಂಬಿದರು.
ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕುಮಾರಿಯರಾದ ಸೀಮಾ ಆಡಗಲ್ (ಬಾಗಲಕೋಟೆ), ಶಾಹಿರಾ ಬಾನು ಲೋದಿ (ವಿಜಯಪುರ) ಮತ್ತು ಲೀಲಾವತಿ ಎನ್ (ಬೆಂಗಳೂರು) ಇವರಿಗೆ ಪ್ರಮಾಣ ಪತ್ರ ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.