ಬೆಂಗಳೂರು: ಇಂದು ಅಡಿಕೆ ಕೇವಲ ವಾಣಿಜ್ಯ ಬೆಳೆಯಾಗಿ ಉಳಿದಿಲ್ಲ. ಹತ್ತು ಹಲವು ಆರೋಗ್ಯದಾಯಕ ಆಂಶಗಳನ್ನೂ ಒಳಗೊಂಡಿರುವ ಪಾನೀಯದ ಮೂಲವಾಗಿಯೂ ಖ್ಯಾತಿ ಪಡೆಯುತ್ತಿದೆ.
ವಿಶ್ವದ ಮೊದಲ, ವಿಶ್ವದರ್ಜೆಯ ಸ್ವದೇಶಿ ಉತ್ಪನ್ನವಾಗಿರುವ; ಆರೋಗ್ಯವರ್ಧಕ ಪೇಯ ‘ಅರೇಕಾ ಟೀ’ ಗೆ ಈಗ ಒಂದು ವರ್ಷ. ಸಾಂಪ್ರದಾಯಿಕ ಅಡಿಕೆ ಚಹಾ ಇಂದು ‘ಅರೇಕಾ ಟೀ’ ಆಗಿ ರೂಪುಗೊಳ್ಳಲು ಅಡಿಕೆ ಬೆಳೆಗಾರರು ನೀಡಿದ ಬೆಂಬಲ ಕಾರಣ. ಧನ್ಯವಾದಗಳು ಅಡಿಕೆ ಬೆಳೆಗಾರರೇ, ಧನ್ಯವಾದಗಳು ಮಾಧ್ಯಮ ಸ್ನೇಹಿತರೇ ಎಂದು ಅರೇಕಾ ಟೀ ಸಂಶೋಧಕ ನಿವೇದನ್ ನೆಂಪೆ ಹೇಳಿದರು.
ಇಂದು (ಜ. 24) ಅರೇಕಾ ಟೀ ರೂಪುಗೊಂಡು ಒಂದು ವರ್ಷವಾದ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಅಡಿಕೆ ಬೆಳೆಗಾರರು ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ಮಾತನಾಡಿದ ನಿವೇದನ್ ನೆಂಪೆ, ಈ ಅಪ್ಪಟ ದೇಶಿ ಉತ್ಪನ್ನ ಆರಂಭವಾದ ಒಂದು ವರ್ಷದಲ್ಲೇ ವಿದೇಶಿ ಮಾರುಕಟ್ಟೆಗಳಿಗೂ ಲಗ್ಗೆ ಇಟ್ಟಿದೆ. ಈ ಸವಿನೆನಪಿನಲ್ಲಿ ಗ್ರೀನ್ ರೆಮಿಡೀಸ್ ಸಂಸ್ಥೆ ರೈತರನ್ನು ಅಭಿನಂದಿಸಲು ನಿರ್ಧರಿಸಿದೆ. ಬದಲಾದ ಜೀವನ ಶೈಲಿ, ನಿಯಂತ್ರಣವಿಲ್ಲದ ಆಹಾರ ಸೇವನೆ.. ಪರಿಣಾಮ ನಮ್ಮ ಶರೀರ ಮಧುಮೇಹದ ಗೂಡಾಗುತ್ತಿದೆ. ಭಾರತವಂತೂ ಮಧುಮೇಹದ ತವರು ಎನಿಸಿಕೊಳ್ಳುತ್ತಿದೆ. ಇತ್ತೀಚಿನ ಆರೋಗ್ಯ ವರದಿಗಳಲ್ಲಿ ಮಧುಮೇಹಕ್ಕೆ ಮೊದಲ ಸ್ಥಾನ.. ಕೇಂದ್ರ ಸರ್ಕಾರವಂತೂ ‘ಮಧುಮೇಹ ಮುಕ್ತ ಭಾರತ’ ಅಭಿಯಾನವನ್ನೇ ಆರಂಭಿಸಿಬಿಟ್ಟಿದೆ. ಇದಕ್ಕೆ ಪೂರಕವಾಗಿ ಗ್ರೀನ್ ರೆಮಿಡೀಸ್ನ ಅರೇಕಾ ಟೀ ಸಹ ಸ್ವಯಂಪ್ರೇರಣೆಯಿಂದ ಮಧುಮೇಹ ತಡೆ ಅಭಿಯಾನವನ್ನು ಶುರುಮಾಡಿದೆ.
ವಿಶೇಷವೆಂದರೆ, ವೈದ್ಯರ ನೆರವು ಮತ್ತು ಸಲಹೆ, ಸೂಚನೆಯೊಂದಿಗೆ ಅನೇಕ ಮಧುಮೇಹ ರೋಗಿಗಳಿಗೆ ಅರೇಕಾ ಟೀ ನೀಡಲಾಗುತ್ತಿದೆ. ವಿಶೇಷವಾಗಿ ವೈದ್ಯರೂ ಸಹ ಮಧುಮೇಹ ನಿಯಂತ್ರಣಕ್ಕೆ ರೋಗಿಗಳಿಗೆ ಅರೇಕಾ ಟೀ ಬಳಸುವಂತೆ ಸಲಹೆ ನೀಡುತ್ತಿದ್ದಾರೆ. ಅರೇಕಾ ಟೀ ಸಮಾಜಕ್ಕೆ ವ್ಯಾಪಕವಾಗಿ ಪ್ರಚಾರಗೊಳಿಸುತ್ತಿರುವ ಗ್ರೀನ್ ರೆಮಿಡಿಸ್ ಇದಕ್ಕೆ ಪೂರಕ ಸಹಕಾರ ನೀಡುತ್ತಿದೆ. ಈ ಮೂಲಕ ಅರೇಕಾ ಟೀ ಮಧುಮೇಹ ಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಅರೇಕಾ ಟೀ ಸಾಮಾಜಿಕ ಹೆಜ್ಜೆ ಇರಿಸಿದೆ.
ದೇಶಿ ಉತ್ಪನ್ನ ಅರೇಕಾ ಟೀ ಕುರಿತು ವ್ಯಾಪಕ ಪ್ರಚಾರದ ಸಹಕಾರ ನೀಡುತ್ತಿರುವ ಮಾಧ್ಯಮ ಮಿತ್ರರಿಗೆ ಅರೇಕಾ ಟೀ ಸಂಶೋಧಕ ನಿವೇದನ್ ನೆಂಪೆ ಹಾಗೂ ಗ್ರೀನ್ ರೆಮಿಡಿಸ್ನ ಎಂಡಿ ವೇಣುಗೋಪಾಲ್ ಹೆಬ್ಬಾರ್ ಅವರಿಂದ ಹೃತ್ಪೂರ್ವಕ ಅಭಿನಂದನೆಗಳು ಎಂದು ನಿವೇದನ್ ನೆಂಪೆ ಹೇಳಿದರು.
ಏನಿದು ಅರೇಕಾ ಟೀ? : ಸಾಮಾನ್ಯ ಅಡಿಕೆ ಮತ್ತು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಟೀ ಪೌಡರ್ ಇದು. ಶೇ.೮೦ರಷ್ಟು ಚಿಟ್ಟಿ ಅಡಿಕೆಯನ್ನು ಸಂಸ್ಕರಿಸಿ ಮತ್ತು ಇದಕ್ಕೆ ಶೇ. ೨೦ರಷ್ಟು ವಿವಿಧ ಗಿಡಮೂಲಿಕೆಗಳನ್ನು ಸೇರಿಸಿ ವಿಶೇಷ ಟೀ ಪೌಡರ್ ತಯಾರಿಸಲಾಗಿದೆ. ಇದಕ್ಕೆ ‘ಅರೇಕಾ ಟೀ’ ಎಂದು ಹೆಸರಿಸಲಾಗಿದೆ. ಗ್ರೀನ್ ಟೀಯಂತೆಯೇ ಇದೂ ಸಹ ಆರೋಗ್ಯಕರ ಪಾನೀಯ ಎಂದು ಪ್ರಯೋಗಗಳ ಮೂಲಕ ಸಾಬೀತಾಗಿದೆ.
ನಿವೇದನ್ ನಂಪೆ : ಗುಟುಕಾದಿಂದ ಮಾನ ಕಳೆದುಕೊಂಡಿದ್ದ ಅಡಿಕೆಯೊಳಗೆ ಇಂಥ ಅದ್ಭುತ ಔಷಧೀಯ ಗುಣಗಳಿಗೆ ಎಂಬುದನ್ನು ಕಂಡುಕೊಂಡಿದ್ದೇ ಈ ನಿವೇದನ್ ನಂಪೆ. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಎಂಬ ಹಳ್ಳಿಯಲ್ಲಿ. ಓದಿದ್ದು ಆಸ್ಟ್ರೇಲಿಯಾದ ಸ್ವಿಂಬರ್ನ್ ವಿಶ್ವವಿದ್ಯಾಲಯದಲ್ಲಿ. ಉತ್ಪಾದನೆ ಮತ್ತು ಮಾರುಕಟ್ಟೆ ಎಂಬ ವಿಷಯದಲ್ಲಿ ವಿದೇಶಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದ ನಿವೇದನ್ಗೆ ೬ ಲಕ್ಷ ರೂಪಾಯಿ ಸಂಬಳ ಕೈಬೀಸಿ ಕರೆಯುತ್ತಿತ್ತು. ಅದೇ ಹೊತ್ತಲ್ಲಿ ರಾಜ್ಯದಲ್ಲಿ ಗುಟಕಾ ನಿಷೇಧಗೊಂಡಿತ್ತು. ಅಡಿಕೆಯಲ್ಲಿ ವಿಷಕಾರಕ ಅಂಶಗಳಿವೆ ಎಂಬ ಗುಲ್ಲೆದ್ದಿತ್ತು. ಇದರಿಂದ ರಾಜ್ಯದ ೬ ಲಕ್ಷ ಅಡಿಕೆ ಬೆಳೆಗಾರರು ಕಂಗಾಲಾಗಿಹೋಗಿದ್ದರು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವದೇಶಕ್ಕೆ ಮರಳಿದ ನಿವೇದನ್, ಅಡಿಕೆಯ ಮಾನ ಉಳಿಸೋಕೆ ಮುಂದಾದರು. ಭಾರತೀಯ ಸಂಪ್ರದಾಯದಲ್ಲಿ ಬೆರೆದುಹೋಗಿದ್ದ ಅಡಿಕೆಯೊಳಗಿನ ಗುಣಗಳ ಸಂಶೋಧನೆಯಲ್ಲಿ ತೊಡಗಿದರು. ಅಡಿಕೆಯ ಬಗ್ಗೆ ಇವರಿಗಿದ್ದ ನಂಬಿಕೆ ಹುಸಿಯಾಗಲಿಲ್ಲ. ೨೦೧೫ರಲ್ಲಿ ಅಡಿಕೆಯೊಳಗೆ ಇಂಥ ಅಗಾಧ ಔಷಧೀಯ ಗುಣಗಳಿಗೆ ಎಂಬುದನ್ನು ಪ್ರಯೋಗಗಳ ಮೂಲಕವೇ ಸಾಬೀತುಪಡಿಸಿದರು. 2014-15 ರ ’ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್’ 2015 ರಲ್ಲಿ ’ಇನೋವೇಟಿವ್ ಪ್ರೊಡಕ್ಟ್ ಆಫ್ ದಿ ಇಯರ್ ಪ್ರಶಸ್ತಿ. ಇವು ಅಡಿಕೆ ಚಹಾ (ಅರೇಕಾ ಟೀ)ಗೆ ಮೂಡಿರುವ ಹೆಮ್ಮೆಯ ಗರಿಗಳು. ಕೇವಲ ಒಂದು ವರ್ಷದ ಹಿಂದೆ (2015 ರಲ್ಲಿ) ಧರ್ಮಸ್ಥಳ ಶ್ರೀವೀರೇಂದ್ರ ಹೆಗ್ಗಡೆಯವರ ಅಮೃತಹಸ್ತದಿಂದ ಮಾರುಕಟ್ಟೆಗೆ ಬಿಡುಗಡೆಯಾದ ಅರೇಕಾ ಟೀ ಇಂದು ಫೈವ್ಸ್ಟಾರ್ ಹೋಟೆಲ್ಗಳಿಗೂ ಲಗ್ಗೆ ಇಟ್ಟಿದೆ. ಪಂಚತಾರಾ ಹೋಟೆಲ್ಗಳಲ್ಲಿ ಅರೇಕಾ ಟೀಯನ್ನು ಕೇಳಿ ಪಡೆದು ಅದರ ಸ್ವಾದವನ್ನು ಸವಿಯುತ್ತಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 944906116
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.