ಬೆಳ್ತಂಗಡಿ : ತೋಟತ್ತಾಡಿ ಗ್ರಾಮದ ಬೋವುಕಾಡು ಎಂಬಲ್ಲಿ ಮಂಗಳವಾರ ಜಾಗದ ತಕರಾರುಗೆ ಸಂಬಂಧ ಪಟ್ಟಂತೆ ಸಂಬಂಧಿಕರ ಮಧ್ಯೆ ಹೊಕೈ ನಡೆದಿದ್ದು, ಎರಡು ಕಡೆಯವರ ಮೇಲು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋವುಕಾಡು ನಿವಾಸಿ ಸೋನು ಕುರಿಯನ್ ಎಂಬವರು ತಕರಾರು ಜಾಗದಲ್ಲಿ ಬೈಕಿನಲ್ಲಿ ಅಡ್ಡಾಡುತ್ತಿದ್ದಾಗ ಈತನ ದೊಡ್ಡಪ್ಪ ಪಾಪಚ್ಚನ್ ಎಂಬವರು ಯಾಕೆ ಅತ್ತಿದಿಂತ್ತ ಅಡ್ಡಾಡುತ್ತಿದ್ದಿ ಎಂದು ಪ್ರಶ್ನಿಸಿದಕ್ಕೆ ಅವ್ಯಾಚ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಲು ಬಂದ ಪಾಪಚ್ಚನ್ ಅವರ ಮಗಳು ಜಿಶಾ, ಹೆಂಡತಿ ತ್ರೈಸಿಯಾ ಹಾಗೂ ಜಿಶಾ ಅವರ ಪುತ್ರಿ ಜಿಶ್ನಾ ಅವರ ಮೇಲೆ ಸೋನು ಕುರಿಯನ್, ಈತನ ತಾಯಿ ಲಿಸಿ ಕುರಿಯನ್ ಮತ್ತು ಚಂಚಲ್ ಎಂಬವರು ಹಲ್ಲೆ ನಡೆಸಿರುವುದಾಗಿ ಜಿಶಾ ಬೆಳ್ತಂಗಡಿ ಪೋಲಿಸರಿಗೆ ದೂರು ನೀಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸೋನು ಕುರಿಯನ್ ಎಂಬವರು ಬೈಕಿನಲ್ಲಿ ಹೋಗುತ್ತಿದ್ದಾಗ ಪಾಪಚ್ಚನ್ ಎಂಬವರು ತಡೆದು ನಿಲ್ಲಿಸಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೈಕನ್ನು ದೂಡಿ ಹಾಕಿದ್ದಾರೆ. ಪಾಪಚ್ಚನ್ ಅವರ ಹೆಂಡತಿ ತ್ರೈಸಿಯಾ ಹಾಗೂ ಮಗಳು ಜಿಶಾ ಹಲ್ಲೆ ನಡೆಸಿದ್ದಾರೆ ಎಂದು ಸೋನು ಕುರಿಯನ್ ಬೆಳ್ತಂಗಡಿ ಪೋಲಿಸರಿಗೆ ದೂರು ನೀಡಿದ್ದಾರೆ.ಎರಡು ತಂಡಗಳ ಮೇಲೂ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.