ಬೆಳ್ತಂಗಡಿ : ಶಾರೀರಿಕ ಮತ್ತು ಮಾನಸಿಕ ಭಿನ್ನ ಸಾಮರ್ಥ್ಯವುಳ್ಳವರಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ಸಿಕ್ಕಿದಲ್ಲಿ ಸಾಮಾಜಿಕ ಅಸಮಾನತೆಯನ್ನು ತೊಲಗಿಸಿಕೊಳ್ಳಬಹುದು ಎಂದು ಎಂಡೋಸಲ್ಪಾನ್ ಹೋರಾಟ ಸಮಿತಿಯ ಸಂಚಾಲಕ ಕೆಂಗುಡೇಲು ಶ್ರೀಧರ ಗೌಡ ಹೇಳಿದರು.ಅವರು ಸಕ್ಷಮ ಬೆಳ್ತಂಗಡಿ ತಾಲೂಕು ಘಟಕವು ಕನ್ಯಾಡಿ ಶಾಲಾ ವಠಾರದಲ್ಲಿ ಹಮ್ಮಿಕೊಂಡ ಸೂರದಾಸ ಜಯಂತಿ ಆಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂತ ಸೂರದಾಸರ ಅಪ್ರತಿಮ ವಿಶ್ವಾಸ ಅವರನ್ನು ಸಂತನನ್ನಾಗಿಸಿತು. ಅವರು ನಮ್ಮ ಪ್ರೇರಣಾ ಶಕ್ತಿ ಎಂದು ಅಭಿಪ್ರಾಯಪಟ್ಟರು.ವೇದಿಕೆಯಲ್ಲಿ ಉಜಿರೆ ಶ್ರೀ ಧ.ಮಂ. ಕಾಲೇಜಿನ ಕನ್ನಡ ಉಪನ್ಯಾಸಕ ಡಾ| ದಿವಾ ಕೊಕ್ಕಡ, ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ವಿದ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸೇವಾಭಾರತಿ ಅಧ್ಯಕ್ಷ ಎಂ. ಹರೀಶ್ ರಾವ್ ವಹಿಸಿದ್ದರು.ಇದೇ ಸಂದರ್ಭದಲ್ಲಿ ಅಂಗದಾನ ನೋಂದಣಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ೫೦ಕ್ಕೂ ಅಧಿಕ ದಾನಿಗಳು ನೋಂದಣಿ ಮಾಡಿಕೊಂಡರು.
ಅಂಧ ಚೇತನರಾದ ಪಡಂಗಡಿಯ ಶಶಿಕಲಾ ಪೈ, ಗುರುವಾಯನಕೆರೆಯ ನೇತ್ರಾವತಿ ಇವರನ್ನು ಗೌರವಿಸಲಾಯಿತು. ಅಂಗವಿಕಲ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರ ನೇಮಿಸಲ್ಪಟ್ಟ ಸ್ವಯಂ ಸೇವಕಿಯರಾದ ಬಬಿತಾ ಹಾಗೂ ಯಶೋಧರನ್ನು ಸನ್ಮಾನಿಸಲಾಯಿತು. ಮುಂಡಾಜೆಯ ಮಿರಯಾ ನಿಕೇತನ ವಿಶೇಷ ಶಾಲೆಯ ಹಾಸ್ಟೆಲ್ ಕಟ್ಟಡದ ಕಿಟಕಿ ಬಾಗಿಲು ದುರಸ್ಥಿಗೆ ರೂ ೩೦ ಸಾವಿರ ಧನ ಸಹಾಯ ನೀಡಲಾಯಿತು.
ಸಕ್ಷಮದ ಅಧ್ಯಕ್ಷ ರಾಮದಾಸ ಭಂಡಾರ್ಕರ್ ಸ್ವಾಗತಿಸಿ, ಖಜಾಂಚಿ ವಿನಾಯಕ ರಾವ್ ಪ್ರಸ್ತಾವಿಸಿದರು. ಉಪಾಧ್ಯಕ್ಷ ಶಂಕರ್ ಗೌಡರ್ ಪ್ರಾರ್ಥಿಸಿದರು. ಜೊತೆ ಕಾರ್ಯದರ್ಶಿ ಸುರೇಶ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಕುಸುಮಾಕರ ಗೌಡ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.