ನವದೆಹಲಿ: ಭಾರತೀಯ ರೈಲ್ವೆ ಕಾರ್ಪೋರೇಶನ್ (ಐಆರ್ಸಿಟಿಸಿ) ಮುಂದಿನ ತಿಂಗಳು ಭಾರತದ ಈಶಾನ್ಯ ಭಾಗದ ಪುರಿ ಜಗನ್ನಾಥ, ಕೋನಾರ್ಕ್ ದೇವಾಲಯ ಮೊದಲಾದ ಯಾತ್ರಾ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಮೊದಲ ಯಾತ್ರಿ ರೈಲನ್ನು ಆರಂಭಿಸಲಿದೆ.
ಇದು 6 ರಾತ್ರಿ ಮತ್ತು 7 ಹಗಲುಗಳ 6,161 ರೂ.ಗಳ ಪ್ಯಾಕೇಜ್ ಆಗಿರಲಿದೆ.
ಫೆಬ್ರವರಿ 17ರಂದು ಗುವಾಹಟಿಯಿಂದ ಈ ರೈಲು ವ್ಯವಸ್ಥೆ ಆರಂಭಗೊಳ್ಳಲಿದ್ದು, ಇದು ಪಶ್ಚಿಮ ಬಂಗಾಳ ಮತ್ತು ಒಡಿಸಾದ ಗಂಗಾಸಾಗರ್, ಶ್ರೀ ಸ್ವಾಮಿ ನಾರಾಯಣ ದೇವಾಲಯ, ಕಾಲಿಘಾಟ್, ಜಗನ್ನಾಥ ಮತ್ತು ಕೋನಾರ್ಕ್ ದೇವಾಲಯ, ಲಿಂಗರಾಜ್ ದೇವಾಲಯ, ಪಶ್ಚಿಮ ಬಂಗಾಳದ ಬಿರ್ಲಾ ದೇವಾಲಯ ಮೊದಲಾದ ಸ್ಥಳಗಳನ್ನು ಒಳಗೊಂಡಿದೆ.
ಈ ಪ್ರವಾಸ ಪ್ಯಾಕೇಜ್ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್, ಊಟದ ವ್ಯವಸ್ಥೆ, ಸ್ಥಳೀಯ ದೃಶ್ಯಗಳ ವೀಕ್ಷಣೆಗೆ ನಾನ್-ಎಸಿ ಬಸ್ ಸೌಲಭ್ಯ, ವಸತಿ ವ್ಯವಸ್ಥೆಗಳನ್ನು ಹೊಂದಿದೆ.
ಈ ಪ್ಯಾಕೇಜ್ ಐಆರ್ಸಿಟಿಸಿಯ ವಿವಿಧ ಯಾತ್ರಾ ಸ್ಥಳಗಳ ಪ್ರವಾಸ ಪ್ಯಾಕೇಜ್ಗಳ ಭಾಗವಾಗಿದೆ.
ಇದು ಪ್ರಧಾನಿ ನರೇಂದ್ರ ಮೋದಿ ಅವರ ಈಶಾನ್ಯ ಭಾಗದ ಪ್ರತ್ಯೇಕತೆ ವಿರುದ್ಧ ಆಕ್ಟ್ ಈಸ್ಟ್ ನೀತಿಯ ಭಾಗವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಪ್ರವಾಸ ಪ್ಯಾಕೇಜ್ ಸೇವೆ ಪಡೆಲು ಇಚ್ಛಿಸುವ ಪ್ರವಾಸಿಗರು ಐಆರ್ಸಿಟಿಸಿ ಕಚೇರಿ, ನೋಂದಾಯಿತ ಇ-ಟಿಕೆಟ್ ಏಜೆಂಟರು ಅಥವಾ www.irctctourism.com ಮೂಲಕ ಆನ್ಲೈನ್ ಟಿಕೆಟ್ ಬುಕಿಂಗ್ ಮಾಡಬಹುದು ಎಂದು ಐಆರ್ಸಿಟಿಸಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.