ನವದೆಹಲಿ: ಸಿಯಾಚಿನ್ನ ನಿಜವಾದ ಹೀರೊ, ಹುತಾತ್ಮ ಯೋಧ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರು ಮರಣೋತ್ತರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆರ್ಮಿ ಡೇ ನಿಮಿತ್ತ ಭಾನುವಾರ ನವದೆಹಲಿಯಲ್ಲಿ ನಡೆದ ಸಮಾರಮಂಭದಲ್ಲಿ ಭೂಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರಿಂದ ಕೊಪ್ಪದ ಅವರ ಪತ್ನಿ ಮಹಾದೇವಿ ಕೊಪ್ಪದ ಶೌರ್ಯ ಪ್ರಶಸ್ತಿ ಸ್ವೀಕರಿಸಿದರು.
೨೦೧೬ ರ ಫೆಬ್ರುವರಿಯಲ್ಲಿ ಸಿಯಾಚಿನ್ ಗಡಿಯಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ ಧಾರವಾಡ ಜಿಲ್ಲೆಯ ಹನುಮಂತಪ್ಪ ಕೊಪ್ಪದ ಕಾಣಿಸದಾಗಿದ್ದರು. ಆದರೆ ಒಂದು ವಾರದ ನಂತರ ಅವರ ಶರೀರ ದೊರಕಿದಾಗ ಅವರಿನ್ನೂ ದೇಶಸೇವೆಗಾಗಿ ಉಸಿರು ಹಿಡಿದಿದ್ದು ಎಲ್ಲರ ಗಮನಸೆಳೆದಿತ್ತು. ಆದರೆ, ಫೆ.11 ರಂದು ಚಿಕಿತ್ಸೆ ಫಲಿಸದೇ ವೀರಮರಣವಪ್ಪಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.