ನವದೆಹಲಿ: ಚೀನಾ ಸಾಮಾಜಿಕ ಜಾಲತಾಣ ‘ವೈಬೋ ’ಗೆ ಎಂಟ್ರಿ ಕೊಟ್ಟಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಬಿಗ್ ಹಿಟ್ ದಾಖಲಿಸಿದ್ದಾರೆ ಎಂದು ಚೀನಾ ಮಾಧ್ಯಮಗಳು ವಿಶ್ಲೇಷಿಸಿವೆ.
‘ಮೋದಿ ವೈಬೋಗೆ ಎಂಟ್ರಿ ಕೊಟ್ಟಿರುವುದು ಸಾವಿರಾರು ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸಿದೆ’ ಎಂದು ಚೀನಾ ಡೈಲಿ ಪತ್ರಿಕೆ ವರದಿ ಮಾಡಿದೆ.
‘ಭೇಟಿಗೂ ಮುನ್ನ ವೈಬೋದಲ್ಲಿ ಮೋದಿ ಬಿಗ್ ಹಿಟ್ ಸಾಧಿಸಿದ್ದಾರೆ’ ಎಂದು ಮತ್ತೊಂದು ಪತ್ರಿಕೆ ಅದು ಹೇಳಿದೆ.
ವೈಬೋನಲ್ಲಿ ಮೋದಿ ಪೋಸ್ಟ್ 3 ಗಂಟೆಗಳಲ್ಲಿ 4,700 ಬಾರಿ ಫಾರ್ವಡ್ ಆಗಿದೆ ಮತ್ತು 7,800 ಕಮೆಂಟ್ಗಳನ್ನು ಪಡೆದುಕೊಂಡಿದೆ.
‘ಹೆಲೋ ಚೀನಾ! ಚೀನಾದ ಗೆಳೆಯರೊಂದಿಗೆ ಸಂವಾದ ನಡೆಸುವುದನ್ನೇ ಎದುರು ನೋಡುತ್ತಿದ್ದೇನೆ’ ಎಂದು ವೈಬೋಗೆ ಎಂಟ್ರಿ ಕೊಟ್ಟ ತಕ್ಷಣ ಮೋದಿ ಮೊದಲ ಪೋಸ್ಟ್ ಮಾಡಿದ್ದರು.
‘ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೋದಿ ಈ ಮೂಲಕವೇ ಸದಾ ಭಾರತೀಯ ಮತ್ತು ವಿಶ್ವದ ಜನರೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತಾರೆ.
ಇದೇ ತಿಂಗಳಲ್ಲಿ ಅವರು ಚೀನಾಗೆ ಭೇಟಿ ನೀಡಲಿದ್ದಾರೆ. ಪ್ರಧಾನಿಯಾದ ಬಳಿಕ ಇದು ಅವರ ಮೊದಲ ಚೀನಾ ಭೇಟಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.