ವಾಷಿಂಗ್ಟನ್: ಭಾರತೀಯ ಐಟಿ ವೃತ್ತಿಪರರು ಹೆಚ್ಚಾಗಿ ಬಳಸುತ್ತಿರುವ H-1B ಹಾಗೂ L1 ವೀಸಾಗಳ ದುರುಪಯೋಗ ನಿಗ್ರಹಿಸಲು ಅಮೇರಿಕಾದ ಶಾಸಕರು ಶಾಸನಬದ್ಧ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಅಟಾರ್ನಿ ಜನರಲ್ ಹುದ್ದೆ ಅಭ್ಯರ್ಥಿ ಭರವಸೆ ನೀಡಿದ್ದಾರೆ.
ಅಮೇರಿಕವು ಅಮೇರಿಕನ್ನರ ಬದಲು ಕಡಿಮೆ ಸಂಬಳಕ್ಕಾಗಿ ಕೆಲಸ ಮಾಡಲು ಸಿದ್ಧರಿದ್ದವರನ್ನು ಬದಲಾಯಿಸುವಷ್ಟು ಮುಕ್ತ ವಿಶ್ವವಾಗಿದೆ ಎಂದು ಜನರು ತಿಳಿದುಕೊಳ್ಳಬಾರದು ಎಂದು ಅಮೇರಿಕಾದ ಅಟಾರ್ನಿ ಜನರಲ್ ಸ್ಥಾನಕ್ಕೆ ದೃಢೀಕರಣ ಇಚಾರಣೆ ಸೆನೇಟರ್ ಜೆಫ್ ಸೆಷನ್ಸ್ ಸೆನೇಟ್ ನ್ಯಾಯಾಂಗ ಸಮಿತಿ ಸದಸ್ಯರಿಗೆ ಹೇಳಿದ್ದಾರೆ.
ಈ ಹಿಂದೆ ಸೆಷನ್ಸ್ ಹಾಗೂ ಗ್ರಾಸ್ಲೀ ಅವರು H-1B ವೀಸಾಗಳ ಮೇಲೆ ಶಾಸನ ತರಲು ಜೊತೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ವಲಸೆ ಸಂಂಧಿತ ಅನೈತಿಕ ಉದ್ಯೋಗ ಪದ್ಧತಿ ನ್ಯಾಯಗಳ ನ್ಯಾಯಾಂಗ ಇಲಾಖೆಯ ವಿಶೇಷ ಕೌನ್ಸೆಲ್ ಕಚೇರಿಯನ್ನು ಯುಎಸ್ ಸೆನೇಟ್ ದೃಢಪಡಿಸಿದಲ್ಲಿ ಸೆಷನ್ಸ್ ನಿರ್ವಹಿಸಲಿದ್ದಾರೆ.
ಈ ಕಚೇರಿ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆ ತಾರತಮ್ಯ ವಿರುದ್ಧದ ನಿಬಂಧನೆಗಳ ಜಾರಿ ಇತ್ಯಾದಿ ಕಾರ್ಯಗಳನ್ನು ನಿರ್ವಹಿಸುತ್ತದೆ. ವಿದೇಶಿ ನಾಗರಿಕರ ರಕ್ಷಣೆ, ಉದ್ಯೋಗ ವೀಸಾ ಮತ್ತು ಅಮೇರಿಕನ್ ನೌಕರರ ಉದ್ಯೋಗ ತಾರತಮ್ಯ ನಿಗ್ರಹಿಸುವ ಜವಾಬ್ದಾರಿಯನ್ನು ಕಚೇರಿ ನಿರ್ವಹಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.