ನವದೆಹಲಿ: paytm ಕಂಪನಿ ತನ್ನ ನಗದು ರಹಿತ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಭಾರತದಲ್ಲಿನ ಸುಮಾರು 550 ಜಿಲ್ಲೆಗಳಲ್ಲಿ 41,000 ಕ್ಕಿಂತಲೂ ಹೆಚ್ಚು ಪೆಟ್ರೋಲ್ ಬಂಕ್ಗಳಲ್ಲಿ ತನ್ನ ಪಾಲುದಾರಿಕೆಯನ್ನು ಘೋಷಿಸಿದೆ.
ಸೋಮವಾರ paytm ಕಂಪನಿ ನಗರದು ರಹಿತ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಪೆಟ್ರೋಲ್ ಬಂಕ್ಗಳಲ್ಲಿ ತನ್ನ ಪಾಲುದಾರಿಕೆಯನ್ನು ಘೋಷಿಸಿತು. ಈ ಪಾಲುದಾರಿಯಲ್ಲಿ, ದ್ವಿಚಕ್ರ ಮತ್ತು ಕಾರು ವಾಹನಗಳ ಮಾಲೀಕರು paytm ಬಳಸಿ ಯಾವುದೇ ಮೇಲ್ತೆರಿಗೆ ಇಲ್ಲದೆ ತಮ್ಮ ಇಂಧನ ಬಿಲ್ನ್ನು ಪಾವತಿಸಬಹುದು ಹಾಗೂ ಚಿಲ್ಲರೆಯ ತೊಂದರೆಯಿಂದ ಮುಕ್ತರಾಗಬಹುದು.
ದೇಶದ ತೈಲ ಉದ್ಯಮವು paytmನ ಈ ನಗದು ರಹಿತ ಪಾವತಿ ವ್ಯವಸ್ಥೆಯನ್ನು ಸ್ವಾಗತಿಸಿದೆ. ಈಗಾಗಲೆ ದೇಶದ 70%ಕ್ಕಿಂತಲೂ ಹೆಚ್ಚು ಪೆಟ್ರೋಲ್ ಪಂಪ್ಗಳಲ್ಲಿ paytm ಸೌಲಭ್ಯವಿದೆ ಮತ್ತು ಈ ವ್ಯವಸ್ಥೆ ಪ್ರತಿ ತಿಂಗಳು 200 ಪ್ರತಿಶತ ಬೆಳೆಯುತ್ತಿದೆ ಎಂದು ವರದಿಯಾಗಿದೆ.
ನಾವು ಪ್ರಸ್ತುತ 550 ಜಿಲ್ಲೆಗಳಲ್ಲಿ 41,000 ಕ್ಕೂ ಹೆಚ್ಚು ಪೆಟ್ರೋಲ್ ಪಂಪ್ಗಳಲ್ಲಿ ನಮ್ಮ ಶೂನ್ಯ ವೆಚ್ಚ ನಗದು ರಹಿತ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ್ದೇವೆ. ಭಾರತದಾದ್ಯಂತ ನಮ್ಮ ಗ್ರಾಹಕರಿಗೆ ನಮ್ಮ ಸೇವೆ ಅತ್ಯಂತ ಅನುಕೂಲಕರ ಮತ್ತು ಉಪಯುಕ್ತವಾಗಲಿದೆ ಎಂದು paytmನ ಹಿರಿಯ ಉಪಾಧ್ಯಕ್ಷ ಕಿರಣ ವಾಸಿರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.