ಮೂಡುಬಿದಿರೆ: ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 5 ಮತ್ತು 6 ರಂದು ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ ಅಂತರ್ ಕಾಲೇಜುಗಳ ಕುಸ್ತಿ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಪುರುಷರ ಹಾಗೂ ಮಹಿಳೆಯರು ಸತತ 12 ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಪುರುಷರ ಹಾಗೂ ಮಹಿಳೆಯರ 16 ದೇಹತೂಕ ವಿಭಾಗಗಳಲ್ಲಿ ನಡೆದಿರುವ ಈ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಪುರುಷರ 6 ವಿಭಾಗದಲ್ಲಿ ಹಾಗೂ ಮಹಿಳೆಯರ 8 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ರನ್ನರ್ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಪುರುಷರ ವಿಭಾಗ:
ರವಿ-57 ಕೆ.ಜಿ, ಹನುಮಂತ-61 ಕೆ.ಜಿ, ರಾಘವೇಂದ್ರ-70 ಕೆ.ಜಿ, ಬಸಪ್ಪ-74 ಕೆ.ಜಿ, ಜೀವನ್-86 ಕೆ.ಜಿ, ಸಾಗರ್-+97 ಕೆಜಿ ವಿಭಾಗದಲ್ಲಿ ಪ್ರಥಮ ರುದ್ರಶೇಖರ್-65 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ವಿಭಾಗ:
ಧನುಶ್ರೀ ಪಾಟೀಲ್-48 ಕೆಜಿ, ಅರ್ಪಣಾ-53 ಕೆ.ಜಿ, ಲಕ್ಷ್ಮೀ-55 ಕೆ.ಜಿ, ಸಾವಕ್ಕ-58 ಕೆಜಿ, ಆತ್ಮಶ್ರೀ-60 ಕೆ.ಜಿ, ಮಹಾಲಕ್ಷ್ಮೀ-63 ಕೆ.ಜಿ, ನಾಗರತ್ನ-69 ಕೆ.ಜಿ, ಅನುಶ್ರೀ +69-75 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.