ನವದೆಹಲಿ : ಪಾರ್ಕಿಂಗ್ ಇಲ್ಲದ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದ್ದರೆ ಅಂತಹ ವಾಹನಗಳ ಫೋಟೋ ತೆಗೆದು ಕಳುಹಿಸಿದರೆ 100 ರೂ. ಬಹುಮಾನ ನೀಡುವ ನೂತನ ಯೋಜನೆಯನ್ನು ಕೇಂದ್ರ ಸಾರಿಗೆ ಇಲಾಖೆ ಜಾರಿಗೆ ತರಲು ಚಿಂತಿಸಿದೆ.
ನಿಲ್ದಾಣವಲ್ಲದ ಜಾಗದಲ್ಲಿ ಕಾರುಗಳನ್ನು ಪಾರ್ಕ್ ಮಾಡಿದ್ದರೆ ಅಂತಹ ಕಾರಿನ ಫೋಟೋ ತೆಗೆದು ಕಳುಹಿಸಿದರೆ, ಫೋಟೋ ಕಳುಹಿಸುವವರಿಗೆ ಬಹುಮಾನವಾಗಿ 100 ರೂ.ಗಳನ್ನು ನೀಡಲು ಕೇಂದ್ರ ಸಾರಿಗೆ ಇಲಾಖೆ ಚಿಂತಿಸಿದೆ.
ಪಾರ್ಕಿಂಗ್ ಇರದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಸರ್ಕಾರ ಈ ನೂತನ ಯೋಜನೆಯನ್ನು ಜಾರಿಗೆ ತರಲು ಚಿಂತಿಸಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇವರು ಸಮಾಲೋಚನೆ ನಡೆಸಿ ಈ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದಾರೆ.
ಬಹಳಷ್ಟು ನಗರಗಳಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವವರು ಹೆಚ್ಚಾಗಿದ್ದಾರೆ. ಅನೇಕ ರಸ್ತೆಗಳೇ ಇಂದು ಪಾರ್ಕಿಂಗ್ ಸ್ಥಳವಾಗಿವೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತಪ್ಪಿಸಲು ಮತ್ತು ರಾಂಗ್ ಪಾರ್ಕಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಈ ನೂತನ ಯೋಜನೆಯನ್ನು ಜಾರಿಗೆ ತರಲು ಚಿಂತಿಸಲಾಗುತ್ತಿದೆ. ರಾಂಗ್ ಪಾರ್ಕಿಂಗ್ ಮಾಡಿರುವ ಫೋಟೋ ತೆಗೆದು ಕಳುಹಿಸಿದವರಿಗೆ ಸಂಚಾರಿ ಪೊಲೀಸರು 100 ರೂ. ಚಲನ್ ನೀಡಿ ಹಣ ಕೊಡುತ್ತಾರೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.