ಧಾರವಾಡ: ಫೆ. 3 ರಿಂದ 10 ರವರೆಗೆ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಕರ್ನಾಟಕ ರಾಜ್ಯ ಓಲಂಪಿಕ್ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿರುವ ರಾಜ್ಯ ಓಲಂಪಿಕ್ ಕ್ರೀಡೆಗಳ ಏರ್ಪಾಡಿಗೆ ವಿವಿಧ ಕ್ರೀಡಾಂಗಣ, ಆಟದ ಮೈದಾನ ಹಾಗೂ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಧಾರವಾಡ ಯುನಿವರ್ಸಿಟಿ ಪಬ್ಲಿಕ್ ಶಾಲೆಯಲ್ಲಿ ಫೆ. 3 ರಿಂದ 5 ರವರೆಗೆ ವೇಟ್ ಲಿಫ್ಟಿಂಗ್, ಜೆ.ಎಸ್.ಎಸ್ ಕಾಲೇಜು ಹುಬ್ಬಳ್ಳಿಯಲ್ಲಿ ಫೆ.4 ಮತ್ತು 5 ರಂದು ಸೈಕ್ಲಿಂಗ್, ಹುಬ್ಬಳ್ಳಿಯ ಮಹಾನಗರ ಪಾಲಿಕೆ ಈಜುಕೊಳದಲ್ಲಿ ಫೆ.4 ರಿಂದ 6 ರವರೆಗೆ ಸ್ವಿಮ್ಮಿಂಗ್, ಧಾರವಾಡದ ಆರ್.ಎನ್.ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.4 ರಿಂದ 6 ರವರೆಗೆ ಟೆಕ್ವಾಂಡೊ, ಧಾರವಾಡದ ಆದರ್ಶ ಶಾಲೆಯಲ್ಲಿ ಫೆ.4 ರಿಂದ 7 ರವರೆಗೆ ಬಾಕ್ಸಿಂಗ್, ಬಾಲ ಮಾರುತಿ ವ್ಯಾಯಾಮ ಶಾಲೆಯಲ್ಲಿ ಫೆ.4 ರಿಂದ 7 ವರೆಗೆ ಜಿಮ್ನ್ಯಾಸ್ಟಿಕ್, ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಫೆ.4 ರಿಂದ 7 ರವರೆಗೆ ಕಬಡ್ಡಿ, ಧಾರವಾಡದ ಮಲ್ಲಸಜ್ಜನ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಫೆ.4 ರಿಂದ 8 ರವರೆಗೆ ಹ್ಯಾಂಡ್ಬಾಲ್, ಕರ್ನಾಟಕ ಕಾಲೇಜು ಆವರಣದಲ್ಲಿ ಫೆ.4 ರಿಂದ 10 ರವರೆಗೆ ಫುಟ್ಬಾಲ್. ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಮೈದಾನದಲ್ಲಿ ಫೆ. 5 ರಿಂದ 9 ರವರೆಗೆ ಲಾನ್ಟೆನಿಸ್. ಕರ್ನಾಟಕ ವಿವಿ ಆವರಣದಲ್ಲಿ ಫೆ. 5 ರಿಂದ 9 ರವರೆಗೆ ನೆಟ್ಬಾಲ್, ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ 5 ರಿಂದ 9 ರವರೆಗೆ ವಾಲಿಬಾಲ್, ಸತ್ತೂರಿನ ಎಸ್ಡಿಎಂ ದಂತ ಮಹಾವಿದ್ಯಾಲಯದಲ್ಲಿ ಫೆ. 6 ರಿಂದ 9 ರವರೆಗೆ ಬ್ಯಾಡ್ಮಿಂಟನ್, ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಫೆ.6 ರಿಂದ 9 ರವರೆಗೆ ಬಾಸ್ಕೆಟ್ ಬಾಲ್. ಧಾರವಾಡದ ಎಸ್ಡಬ್ಲುಆರ್ ಸಮುದಾಯ ಭವನದಲ್ಲಿ ಫೆ. 6 ರಿಂದ 10 ರವರೆಗೆ ವುಶು, ಆರ್.ಎನ್ ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.7 ರಿಂದ 9 ರವರೆಗೆ ಜುಡೊ, ಯುನಿವರ್ಸಿಟಿ ಪಬ್ಲಿಕ್ ಶಾಲೆಯಲ್ಲಿ ಫೆ.7 ರಿಂದ 9ರವರೆಗೆ ಖೋ ಖೋ, ಡಾ.ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಫೆ.7 ರಿಂದ 10 ರವರೆಗೆ ಕುಸ್ತಿ. ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಫೆ. 7 ರಿಂದ 10 ರವರೆಗೆ ಅಥ್ಲೆಟಿಕ್ಸ್ ಕಾಸ್ಮಸ್ ಕ್ಲಬ್ನಲ್ಲಿ ಫೆ.9 ಮತ್ತು 10 ರಂದು ಟೇಬಲ್ ಟೆನಿಸ್ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
ರೈಫಲ್ ಶೂಟಿಂಗ್ ಮತ್ತು ಟ್ರಯಥಾನ್ ಕ್ರೀಡೆಗಳನ್ನು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.