ನವದೆಹಲಿ: ಕೊಲ್ಕತ್ತಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪರಿಸ್ಥಿತಿ ಹೀಗೇ ಮುಂದುವರೆದರೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಅಗತ್ಯ ಇದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಕೊಲ್ಕತ್ತಾದಲ್ಲಿ ಮೂರು ವಾರಗಳಿಂದ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಗಳನ್ನು ಗಮನಿಸಿದರೆ, ಸುವ್ಯವಸ್ಥೆ ಕಾಪಾಡಿ ಇಲ್ಲವೇ ರಾಷ್ಟ್ರಪತಿ ಆಡಳಿತ ಹೇರುವ ಕುರಿತು ಪಶ್ಚಿಮ ಬಂಗಾಳಕ್ಕೆ ಕೇಂದ್ರ ಎಚ್ಚರಿಸಬೇಕು ಎಂದಿದ್ದಾರೆ.
ನೋಟು ಅಮಾನ್ಯೀಕರಣ, ರಾಷ್ಟ್ರೀಯ ಚರ್ಚೆಗೊಳಗಾದ ದಲಘರ್ ಘಟನೆ, ಟಿಎಂಸಿ ಸಂಸದರಾದ ತಪಲ್ ಹಾಗೂ ಸುದೀಪ್ ಬಂದ್ಯೋಪಾಧ್ಯಾಯ ಅವರ ಬಂಧನ ಮಮತಾ ಬ್ಯಾನರ್ಜಿಯವರ ನಿದ್ದೆಗೆಡಿಸಿವೆ ಎಂದಿದ್ದಾರೆ.
ಟಿಎಂಸಿ ಸಂಸದರನ್ನು ಸಿಬಿಐ ಬಂಧಿಸಿದ ಮೇಲಂತೂ, ತಕ್ಷಣವೇ ಟಿಎಂಸಿ ಕಾರ್ಯಕರ್ತರು ಅರಾಜಕತೆ ಸೃಷ್ಟಿಸಿದ್ದು, ಬಿಜೆಪಿ ಕಚೇರಿ ಹಾಗೂ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.