ನವದೆಹಲಿ: ರಿಲಯನ್ಸ್ ಜಿಯೋ ಡಿಸೆಂಬರ್ 2016ರ ತನ್ನ ವೆಲ್ಕಮ್ ಆಫರ್ನ್ನು ನ್ಯೂ ಇಯರ್ ಆಫರ್ ಆಗಿ ಬದಲಾಯಿಸಿ ಮಾರ್ಚ್ 31ರ ವರೆಗೆ ಮುಂದುವರೆಸಿದ ಹಿನ್ನೆಲೆಯಲ್ಲಿ ಇತರ ಟೆಲಿಕಾಂ ನಿರ್ವಾಹಕರೂ ಹೊಸ ಆಫರ್ಗಳು ಬರುತ್ತಲೇ ಇವೆ.
ಭಾರತದ ಪ್ರಮುಖ ಟೆಲಿಕಾಂ ನಿರ್ವಾಹಕ ಭಾರ್ತಿ ಏರ್ಟೆಲ್, ಉಳಿದ ಕಂಪೆನಿಗಳಿಗೆ ಪೈಪೋಟಿ ನೀಡಲು ತನ್ನ 4G ಗ್ರಾಹಕರಿಗೆ 12 ತಿಂಗಳ ಉಚಿತ 3GB ಡಾಟಾ ಒದಗಿಸುವುದಾಗಿ ಘೋಷಿಸಿದೆ.
3G ಸಂಪರ್ಕ ಹೊಂದಿದ ಏರ್ಟೆಲ್ ಗ್ರಾಹಕರು 4G ಮೊಬೈಲ್ನೊಂದಗೆ 4Gಗೆ ಬದಲಾಯಿಸಬೇಕಿದೆ.
ಗ್ರಾಹಕರು ಈ ಆಫರ್ನ್ನು ಡಿಸೆಂಬರ್ 31, 2017ರ ವರೆಗೆ ಪಡೆಯಲಿದ್ದು, ಇದು ಇತರ ಏರ್ಟೆಲ್ ಪ್ಯಾಕ್ಗಳ ಪ್ಲಾನ್ ಹೊರತಾಗಿರಲಿವೆ ಎಂದು ಭಾರ್ತಿ ಏರ್ಟೆಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಆಫರ್ ಅಡಿಯಲ್ಲಿ ಏರ್ಟೆಲ್ ಗ್ರಾಹಕರು 12 ತಿಂಗಳಿಗೆ 9,000 ರೂ. ವರೆಗಿನ ಉಚಿತ ಡಾಟಾ ನೀಡಲಿದೆ. ಈ ಆಫರ್ ಭಾರತದಾದ್ಯಂತ ಜ.4ರಿಂದ ಫೆ.28ರ ವರೆಗೆ ಇರಲಿದೆ.
ಈಗಾಗಲೇ ಉಚಿತ ವಾಯ್ಸ್ ಕರೆಗಳೊಂದಿಗೆ 4G ಡಾಟಾ ಹೊಂದಿದ ಪ್ರೀಪೇಯ್ಡ್ ಗ್ರಾಹಕರು ಉಚಿತ 4GB ಡಾಟಾದೊಂದಿಗೆ ಉಚಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಪಡೆಯಲಿದ್ದಾರೆ.
ಇನ್ನು 4G ಮೊಬೈಲ್ ಹ್ಯಾಂಡ್ಸೆಟ್ ಹೊಂದಿರುವ ಪೋಸ್ಟ್ಪೇಯ್ಡ್ ಗ್ರಾಹಕರು 4G ಗೆ ಬದಲಾಯಿಸಿದಲ್ಲಿ 3GB ಉಚಿತ ಡಾಟಾ ಪಡೆಯಲಿದ್ದಾರೆ ಎಂದು ಅದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.