ತಿರುಪತಿ: ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಇಂಡಿಯನ್ ಸೈನ್ಸ್ ಕಾಂಗ್ರೆಸ್ನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಜ್ಞಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜ್ಞಾನದಿಂದ ಜನರ ಆಕಾಂಕ್ಷೆಗಳನ್ನು ಈಡೇರಿಸಬೇಕು ಎಂದು ಹೇಳಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ‘ತಮ್ಮ ದೃಷ್ಟಿಕೋನ, ನಾಯಕತ್ವ, ಕಾರ್ಯಕ್ಷಮತೆನ್ನು ತೋರಿ ದಣಿವಿಲ್ಲದೇ ದುಡಿಯುತ್ತಿರುವ ವಿಜ್ಞಾನಿಗಳಿಗೆ ದೇಶ ಕೃತಜ್ಞವಾಗಿದೆ’ ಎಂದು ಹೇಳಿದ್ದಾರೆ.
ಐವರು ಮಂದಿ ನೊಬೆಲ್ ಪುರಸ್ಕೃತರು ಸೇರಿದಂತೆ ಶ್ರೇಷ್ಠ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸೇವೆ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯ ಪ್ರಾಮುಖ್ಯತೆ, ಸೈಬರ್-ಫಿಸಿಕಲ್ ಸಿಸ್ಟಮ್ನಲ್ಲಿ ಕ್ಷಿಪ್ರ ಜಾಗತಿಕ ಬೆಳವಣಿಗೆ ಬಗ್ಗೆ ಒತ್ತು ನೀಡುವಂತೆ ಒತ್ತಾಯಿಸಿದ್ದಾರೆ.
ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು ಪ್ರಮುಖ ಜಾಗತಿಕ ಮಾನದಂಡಗಳ ಕ್ಷೇತ್ರದಲ್ಲಿ ಮೂಲ ಸಂಶೋಧನೆಯನ್ನು ಬಲಪಡಿಸಬೇಕು ಎನ್ನುವ ಮೂಲಕ ಮೋದಿ ಅವರು ಸಂಸ್ಥೆಗಳನ್ನು ಪ್ರೋತ್ಸಾಹಿಸಿದ್ದಾರೆ.
ವಿಜ್ಞಾನಿಗಳು ತಮ್ಮ ಮೂಲ ಜ್ಞಾನವನ್ನು ಪರಿವರ್ತಿಸಿ ನವೀನ ಸಂಶೋಧನೆ, ಸ್ಟಾರ್ಟ್-ಅಪ್, ಉದ್ಯಗಳನ್ನು ಆರಂಭಿಸಿದಲ್ಲಿ ಸುಸ್ಥಿರ ಬೆಳವಣಿಗೆ ಸಾಧಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
ಇಂಡಿಯನ್ ಸೈನ್ಸ್ ಕಾಂಗ್ರೆಸ್ ‘ರಾಷ್ಟ್ರೀಯ ಅಭಿವೃದ್ಧಿಗೆ ವಿಜ್ಷಾನ ಮತ್ತು ತಂತ್ರಜ್ಞಾನ’ ಎಂಬ ವಿಷಯದ ಕುರಿತ ೫ ದಿನಗಳ ಕಾರ್ಯಕ್ರತಮವಾಗಿದ್ದು, ಇದು 104ನೇ ಸಮ್ಮೇಳನವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.