ನವದೆಹಲಿ: ಪ್ರಧಾನಿ ನರೇಂದ್ರ ತಮ್ಮ ಹೇಳಿಕೆಗಳ ಮೂಲಕ ಮುಸ್ಲಿಂರ ವಿರುದ್ಧ ಯುದ್ಧ ಸಾರುತ್ತಿದ್ದಾರೆ ಎಂದು ಅಲ್ಖೈದಾ ಉಗ್ರ ಸಂಘಟನೆಯ ಭಾರತ ಘಟಕ ವಿಡಿಯೋವೊಂದರಲ್ಲಿ ತಿಳಿಸಿದೆ.
ವಿಶ್ವಬ್ಯಾಂಕ್, ಐಎಂಎಫ್ ನಿಯಮಗಳು, ದ್ರೋನ್ ದಾಳಿ, ಚಾರ್ಲೆ ಹೆಬ್ಡೋ ಬರವಣಿಗೆ ಮತ್ತು ನರೇಂದ್ರ ಮೋದಿಯವರ ಹೇಳಿಕೆಗಳ ಮೂಲಕ ಇಂದು ಜಗತ್ತಿನಲ್ಲಿ ಇಸ್ಲಾಂ ವಿರುದ್ಧ ಯುದ್ಧ ಸಾರಲಾಗುತ್ತಿದೆ ಎಂದು ಅಲ್ಖೈದಾ ಭಾರತ ಘಟಕದ ಮುಖಂಡ ಅಸೀಮ್ ಉಮರ್ ವಿಡಿಯೋವೊಂದರಲ್ಲಿ ತಿಳಿಸಿದ್ದಾನೆ.
ಅಲ್ಲದೇ ಬಾಂಗ್ಲಾದೇಶ ಬ್ಲಾಗರ್, ಹೋರಾಟಗಾರ ಅವಿಜಿತ್ ರಾಯ್ ಸೇರಿದಂತೆ ಬಾಂಗ್ಲಾ ಮತ್ತು ಪಾಕಿಸ್ಥಾನದಲ್ಲಿನ ಇತರ ಧರ್ಮನಿಂದಕರ ಹತ್ಯೆಗೆ ನಾವೇ ಕಾರಣರೆಂದು ಆತ ಹೇಳಿಕೊಂಡಿದ್ದಾನೆ.
ಈತನ ವಿಡಿಯೋ ಹೇಳಿಕೆಯ ಬಗ್ಗೆ ಗುಪ್ತಚರ ಇಲಾಖೆ ಪರಿಶೀಲನೆ ನಡೆಸುತ್ತಿದೆ, ‘ಫ್ರಂ ಫ್ರಾನ್ಸ್ ಟು ಬಾಂಗ್ಲಾದೇಶ್’ ಎಂಬ ಹೆಸರಿನ ಈ ವಿಡಿಯೋದಲ್ಲಿ ಆತ ಯಾವುದೇ ಬೆದರಿಕೆಯನ್ನು ಹಾಕಿಲ್ಲ ಎನ್ನಲಾಗಿದೆ.
ಆತ ವಿಡಿಯೋದಲ್ಲಿ ಉಗ್ರವಾದಿ ಪ್ರಧಾನಿಯನ್ನು ಉಲ್ಲೇಖಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗೀ ಭದ್ರತಾ ಏಜೆನ್ಸಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.