ಕೊಲೊಂಬೊ: ಇಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಂಡರ್-19 ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡದ ವಿರುದ್ಧ ಭಾರತ 34 ರನ್ಗಳಿಂದ ಜಯಶಾಲಿಯಾಗಿ ಏಷ್ಯಾ ಕಪ್ನ್ನು ತನ್ನದಾಗಿಸಿಕೊಂಡಿದೆ.
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಟಾಸ್ ಗೆಲ್ಲುವ ಮೂಲಕ ಬ್ಯಾಟಿಂಗ್ನ್ನು ಆಯ್ಕೆ ಮಾಡಿಕೊಂಡು 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 273 ರನ್ಗಳನ್ನು ಪೇರಿಸಿತ್ತು.
ಭಾರತದ ಮೊದಲ 5 ಬ್ಯಾಟ್ಸಮನ್ಗಳ ನೆರವಿನಿಂದ ಈ ಬೃಹತ್ ಮೊತ್ತವನ್ನು ದಾಖಲಿಸಲು ಸಾಧ್ಯವಾಯಿತು. ಹಿಮಾಂಶು ರಾಣಾ 92 ಬಾಲ್ಗಳಲ್ಲಿ 70 ರನ್ ಗಳಿಸುವುದರೊಂದಿಗೆ ಉತ್ತಮ ಪ್ರದರ್ಶನ ನೀಡಿದರು.
ನಂತರ ಭಾರತದ ಸ್ಪಿನ್ನರ್ಗಳ ಬೌಲಿಂಗ ದಾಳಿಗೆ ಶ್ರೀಲಂಕಾ 48.4 ಓವರ್ಗಳಲ್ಲಿ239 ರನ್ ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಸೋಲನ್ನು ಅನುಭವಿಸಿತು.
ಶ್ರೀಲಂಕಾ ಪರ ರೆವೆನ್ ಕೆಲ್ಲಿ (62), ನಾಯಕ ಕಾಮಿಂದು ಮೆಂಡಿಸ್(53) ಅರ್ಧಶತಕ ಮಾಡಿದರೂ ತಂಡ ಸೋಲು ಅನುಭವಿಸಬೇಕಾಯಿತು. ಕೊನೆಯ 10 ಓವರ್ಗಳಲ್ಲಿ ತಂಡ ತನ್ನ ಫಾರ್ಮ್ನ್ನು ಕಳೆದುಕೊಂಡು ಪರದಾಡುವಂತಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.