ಹುಬ್ಬಳ್ಳಿ : ಸಹಜ ಸಮೃದ್ಧ ಮತ್ತು ’ಮೈಲ್ಸ್ ಫಾರ್ ಮಿಲ್ಲೆಟ್’ ಮ್ಯಾರಥಾನ್ ಜೊತೆಗೂಡಿ, ಹುಬ್ಬಳ್ಳಿಯ ಭಗಿನಿ ಮಂಡಳಿ, ಜೆ.ಸಿ.ನಗರ, ಮಹಿಳಾ ಕಾಲೇಜ್ ರಸ್ತೆಯಲ್ಲಿ ಡಿಸೆಂಬರ್ 16 ರಿಂದ 18 ರವರೆಗೆ ’ಸಿರಿಧಾನ್ಯ ಮೇಳ’ವನ್ನು ಏರ್ಪಡಿಸಲಾಗಿದೆ.
ಫಾಸ್ಟ್ ಫುಡ್ ಮತ್ತು ಸುಲಭ ಆಹಾರ ತಯಾರಿ ಎಂಬ ಪ್ರಚಾರದ ಮೋಡಿಗೆ ಮಾರುಹೋಗುತ್ತಿರುವ ಇಂದಿನ ಪೀಳಿಗೆಯು ಸಾಂಪ್ರದಾಯಿಕ ದೇಸಿ ಅಡುಗೆಯ ಸೊಗಡನ್ನು ಮರೆಯುತ್ತಿದೆ. ನವಣೆ ಕಜ್ಜಾಯ, ಕೆಂಪಕ್ಕಿಯ ಇಡ್ಲಿ, ನೀರು ದೋಸೆ, ಸಜ್ಜೆಯ ಮಾದಲಿ, ಸಾವೆ ಉಪ್ಪಿಟ್ಟು , ಬರಗು ರೊಟ್ಟಿ-ಎಣ್ಣೆಗಾಯಿ, ಸಿಹಿ ಉಂಡೆಗಳು ಬಳಕೆ ಇಲ್ಲದೆ ಅಪರೂಪವಾಗುತ್ತಿವೆ.
ಸಿರಿಧಾನ್ಯ,ದೇಸಿ ಅಕ್ಕಿ , ಕಾಳು ಮತ್ತು ಕಾಡುಗಿಡಗಳಿಂದ ತಯಾರಿಸುವ ಸಾಂಪ್ರದಾಯಿಕ ಮತ್ತು ಹೊಸ ಅಡುಗೆಗಳನ್ನು ಪ್ರೋತ್ಸಾಹಿಸಲೆಂದು ’ದೇಸಿ ಅಡುಗೆ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.
ಅಪಾರ ಪೌಷ್ಟಿಕಾಂಶಗಳ ಆಗರವಾಗಿರುವ ಸಿರಿ ಧಾನ್ಯ ಮತ್ತು ದೇಸಿ ಅಕ್ಕಿಗಳನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸಿರಿಧಾನ್ಯ ಮೇಳದ ಭಾಗವಾಗಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಸಿರಿಧಾನ್ಯ,ದೇಸಿ ಅಕ್ಕಿ , ಕಾಳು ಮತ್ತು ಕಾಡುಗಿಡಗಳಿಂದ ತಯಾರಿಸುವ ಅಥವಾ ಅವುಗಳ ಬಳಕೆಯನ್ನೊಳಗೊಂಡ ಯಾವುದೇ ಬಗೆಯ ಅಡುಗೆಯನ್ನು ತಯಾರಿಸಿ, ಡಿಸೆಂಬರ್ 17 ರ ಬೆಳಿಗ್ಗೆ 10.30 ಘಂಟೆಗೆ (ಶನಿವಾರ) ಮೇಳಕ್ಕೆ ತರಬಹುದು. ಅಂತಹ ಅಡುಗೆಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊಸ ಅಡುಗೆಯಾಗಿರಬಹುದು. ಸಾಂಪ್ರದಾಯಿಕ ವಿಶೇಷ ಅಡುಗೆಗಳಿಗೆ ಆದ್ಯತೆ. ಉತ್ತಮ ಅಡುಗೆ ತಯಾರಿಸಿದವರಿಗೆ ಆಕರ್ಷಕ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು. ಉತ್ತಮ ದೇಸಿ ಅಡುಗೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಪ್ರಕಾಶ್, ಸಾವಯವ ಕೃಷಿಕರ ಬಳಗ ಫೋನ್: 9538691868
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.