ನವದೆಹಲಿ: ನಾವು ಮಕ್ಕಳಿದ್ದಾಗ ನಮ್ಮ ವಿಷಯಗಳು, ಆಹಾರ, ಇತರ ವಸ್ತುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಕಲಿಸಲಾಗುತ್ತಿತ್ತು. ನಾವು ಬೆಳೆದು ನಮ್ಮ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿದಂತೆ ನಾವು ಜೀವನದಲ್ಲಿ ಮುಂದೆಯೂ ಹಂಚಿಕೊಳ್ಳಬೇಕು ಎಂಬ ವಿಚಾರವನ್ನು ಮರೆತುಬಿಡುತ್ತೇವೆ.
ಉತ್ತರ ದೆಹಲಿಯ ಒಂದು ಕೆಫೆ ‘ಎಕ್ಸ್ಚೇಂಜ್ ಓವರ್ ಕಾಫಿ'(Xchange Over Coffee) ಈ ರೀರಿಯ ವೈಶಿಷ್ಟ್ಯವನ್ನು ಮುಂದುವರೆಸಿಕೊಂಡು ಬಂದಿದೆ. ಅದರ ಫೇಸ್ಬುಕ್ ಚರಿತ್ರೆ ಪ್ರಕಾರ ಕೆಫೆ ಖರೀದಿ ಬದಲು ಹಂಚಿಕೆಯಲ್ಲಿ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದೆ. ‘ಹಂಚಿಕೆ ಎಂದರೆ ಒಗ್ಗೂಡಿಸುವಿಕೆ! ಖರೀದಿ ಬದಲು ಜನರು ಹಂಚಿಕೆ/ವಿನಿಮಯದ ಮೂಲಕ ಸಮುದಾಯ ನಿರ್ಮಿಸುವುದು’ ಎಂದು ಅದರ ಬಯೋಗ್ರಫಿಯಲ್ಲಿ ತಿಳಿಸಿದೆ.
ಆರ್ಥಿಕತೆಯ ಹಂಚಿಕೆ ಪರಿಕಲ್ಪನೆಯಿಂದ ಪ್ರೇರಿತರಾಗಿ ಪುಸ್ತಕ ವಿನಿಮಯ/ಹಂಚಿಕೆಯ ಆರಂಭಿಸಿದೆವು. ಇದರಲ್ಲಿ ಸಂಸ್ಥೆಗಳ ಬದಲು ಜನರಿಗೆ ನಿಯಂತ್ರಣದ ಅಧಿಕಾರ ನೀಡಲಾಗುತ್ತದೆ. ಸಾಂಸ್ಥಿಕ ಧಿಕಾರಿಗಳ ಹೊರತು ಅಪರಿಚಿತರ ಮೇಲೆ ನಂಬಿಕೆ ಇರಿಸಲಾಗಿದೆ ಎಂದು ಕೆಫೆಯ ಸಹ ಸಂಸ್ಥಾಪಕ ಶಿವಮ್ ದೇವನ್ ಹೇಳಿದ್ದಾರೆ.
XCO ವೇದಿಕೆ ಬಳಸಿ ಪುಸ್ತಕಗಳನ್ನು ವಿನಿಮಯ ಮಾಡಿದ ಪ್ರತಿಯೊಬ್ಬರಿಗೂ ಉಚಿತ ಆಹಾರ ಮತ್ತು ತಂಪು ಪಾನೀಯ ವಿತರಿಸಲಾಗುತ್ತದೆ.
ಆಹಾರ ತಯಾರಿಕೆಯಲ್ಲಿ ಯಾವುದೇ ಜ್ಞಾನ ಹೊಂದಿರದ ಇಂಜಿನಿಯರಿಂಗ್ ಹಿನ್ನೆಲೆಯ ಸಂಸ್ಥಾಪಕರು ಆಹಾರ ತಯಾರಿಕೆಯಲ್ಲಿ ಪರಿಣತಿ ಹೊಂದಿ ಈ ಕೆಫೆ ನಡೆಸುತ್ತಿರುವುದು ವಿಷೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.