ನವದೆಹಲಿ: ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಭೂಕಂಪದಲ್ಲಿ ಮಡಿದ ಭಾರತೀಯರಿಗೆ ಸಂತಾಪವನ್ನು ಸೂಚಿಸಿದರು.
ಈ ಸಂದರ್ಭ ಅವರು ಭೂಕಂಪ ಪೀಡಿತ ನೇಪಾಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯ ನಡೆಸುತ್ತಿರುವ ಭಾರತದ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಮಾತುಕತೆಯ ವೇಳೆ ಮೋದಿ ‘ಸಾರ್ಕ್ ದೇಶಗಳು ಜೊತೆಯಾಗಿ ದುರಂತದ ಅನಾಹುತವನ್ನು ಹೇಗೆ ಕಡಿಮೆಗೊಳಿಸಬಹುದು ಎಂಬ ಬಗ್ಗೆ ನಿರಂತರ ಜಂಟಿ ಪರಿಹಾರ ಮತ್ತು ರಕ್ಷಣಾ ಅಭ್ಯಾಸ ನಡೆಸಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಶರೀಫ್ ಅವರೂ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎನ್ನಲಾಗಿದೆ.
ಅಕಾಲಿಕ ಮಳೆಯಿಂದ ಉಂಟಾದ ದುಷ್ಪರಿಣಾಮ, ಎರಡು ದೇಶಗಳಲ್ಲಿನ ಬೆಳೆ ನಷ್ಟದ ಬಗ್ಗೆಯೂ ಇಬ್ಬರು ಮುಖಂಡರು ಪರಸ್ಪರ ಚರ್ಚೆ ನಡೆಸಿದರು.
ಶರೀಫ್ ದೂರವಾಣಿ ಕರೆ ಮಾಡಿರುವ ವಿಷಯವನ್ನು ಮೋದಿ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.