ಬೆಂಗಳೂರು: ಇಲ್ಲಿಯ ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎಷ್ಯನ್ ಫುಟ್ಬಾಲ್ (ಎಫ್ಸಿ) ಕಪ್ ಫುಟ್ಬಾಲ್ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ (ಬಿಎಫ್ಸಿ) 3-1 ಗೋಲುಗಳಿಂದ ಹಾಲಿ ಚಾಂಪಿಯನ್ ಮಲೇಷ್ಯಾದ ಜೋಹರ್ ದಾರುಲ್ ತಜೀಮ್(ಜೆಡಿಟಿ) ತಂಡವನ್ನು ಸೋಲಿಸಿದೆ.
ಇದರೊಂದಿಗೆ ಬೆಂಗಳೂರು ಕ್ಲಬ್ (ಬಿಎಫ್ಸಿ) ಏಷ್ಯನ್ ಫುಟ್ಬಾಲ್(ಎಎಫ್ಸಿ) ಕಪ್ ಫೈನಲ್ ತಲುಪಿದ ಭಾರತದ ಮೊಟ್ಟಮೊದಲ ಕ್ಲಬ್ ಎಂಬ ಹಿರಿಮೆಗೆ ಪಾತ್ರವಾಗಿದೆ.
ಪ್ರತಿಯೊಬ್ಬ ಆಟಗಾರನೂ ತನ್ನ ಯೋಜನೆಗಳನ್ನು ಕಾರ್ಯರಪಕ್ಕೆ ತಂದು ಕ್ರೀಡಾಂಗಣದಲ್ಲಿ ತನ್ನ ಪಾತ್ರ ವಹಿಸಿದ್ದಾರೆ. ತಮ್ಮ ಕೋಚ್ ನೀಡಿದ ತರಬೇತಿ ಮತ್ತು ಕಲ್ಪನೆಗಳನ್ನು ಕಾರ್ಯಗತಗೊಳಿಸಿದಲ್ಲಿ ತಂಡ ಗೆಲ್ಲಲು ಸಾಧ್ಯ ಎಂದು ಆಟಗಾರರು ತಿಳಿದಿದ್ದಾರೆ ಎಂದು ತಂಡದ ಕಪ್ತಾನ ಸುನಿಲ್ ಛೇತ್ರಿ ಹೇಳಿದ್ದಾರೆ.
ಸೆಪ್ಟೆಂಬಲ್ 28ರಂದು ಮಲೇಷ್ಯಾದಲ್ಲಿ ನಡೆದಿದ್ದ ಸೆಮಿಫೈನಲ್ನ ಮೊದಲ ಪಂದ್ಯದಲ್ಲಿ ಬಿಎಫ್ಸಿ 1-1 ಗೋಲುಗಳಿಂದ ಡ್ರಾ ಸಾಧಿಸಿತ್ತು.
ನವೆಂಬರ್ 5 ರಂದು ನಡೆಯಲಿರುವ ಎಎಫ್ಸಿ ಕಪ್ ಫೈನಲ್ ಪಂದ್ಯದಲ್ಲಿ ಬಿಎಫ್ಸಿ ತಂಡ ಇರಾಕ್ನ ಅಲ್ ಕ್ಯುವಾ ಅಲ್ ಜಾವಿಯಾ ತಂಡವನ್ನು ಎದುರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.