ನವದೆಹಲಿ : ರಾಷ್ಟ್ರಪತಿಗೂ ಮೊದಲು ಅವರು ರಾಷ್ಟ್ರರತ್ನ ಎಂದೇ ಖ್ಯಾತರಾಗಿದ್ದ ಮಿಸೈಲ್ ಮ್ಯಾನ್ ಡಾ. ಎಪಿಜೆ ಅಬ್ದುಲ್ ಕಲಾಂ ಅವರ 85ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಕಲಾಂ ಅವರಿಗೆ ನಮನಗಳನ್ನು ಸಲ್ಲಿಸಿದರು.
‘ನಮ್ಮ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನಂದು ಅವರಿಗೆ ನನ್ನ ನಮನಗಳು. ಪ್ರತಿ ಭಾರತೀಯ ಕಲ್ಪನೆಗಳನ್ನು ಸೆರೆಹಿಡಿದ ವ್ಯಕ್ತಿ ಅವರು’ ಎಂದು ಟ್ವೀಟ್ ಮಾಡಿದ್ದಾರೆ.
Tributes to our former President, the person who captured the imagination of every Indian, Dr. APJ Abdul Kalam on his birth anniversary.
— Narendra Modi (@narendramodi) October 15, 2016
ತಮಿಳುನಾಡಿನ ರಾಮೇಶ್ವರಂನಲ್ಲಿ 1931 ರ ಅಕ್ಟೋಬರ್ 15 ರಂದು ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಜನಿಸಿದ್ದರು. ಶಿಲಾಂಗ್ನ ಐಐಎಂನಲ್ಲಿ ಭಾಷಣ ಮಾಡುತ್ತಿರುವಾಗ ಹೃದಯಾಘಾತವಾಗಿ 2015 ರ ಜುಲೈ 27 ರಂದು ಇಹಲೋಕ ತ್ಯಜಿಸಿದ್ದರು.
ಕಲಾಂ ಅವರೊಬ್ಬ ಶ್ರೇಷ್ಠ ವಿಜ್ಞಾನಿ, ಶ್ರೇಷ್ಠ ರಾಷ್ಟ್ರಪತಿ. ಅವರೊಬ್ಬ ಸಾಮಾನ್ಯ ವ್ಯಕ್ತಿಯಂತೆಯೇ ಸರಳವಾಗಿ ಬದುಕಿದರು. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬುದು ಅವರ ಬದುಕಿನ ಸಂದೇಶವಾಗಿತ್ತು. ದೇಶ ಮೊದಲು, ಅನಂತರ ನಾವೆಲ್ಲ ಎಂಬುದು ಅವರ ಬದುಕಿನ ಮಂತ್ರವಾಗಿತ್ತು. ‘ಮಾ ತುಝೆ ಸಲಾಂ’ ಎಂದು ಭಾರತಮಾತೆಯ ಅಡಿದಾವರೆಗಳಿಗೆ ತಮ್ಮ ಬುದ್ಧಿ, ಶಕ್ತಿ, ಸಾಮರ್ಥ್ಯ, ಪ್ರತಿಭೆ ಎಲ್ಲವನ್ನು ಕಲಾಂ ಅರ್ಪಿಸಿದ್ದರು. ಅವರ ಬದುಕೇ ಒಂದು ಸಂದೇಶ, ಒಂದು ಮೇಲ್ಪಂಕ್ತಿ. ನಾವದನ್ನು ಪ್ರಾಮಾಣಿಕವಾಗಿ ಅನುಸರಿಸಬೇಕಷ್ಟೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.