ಕಾನ್ಪುರ್: ಇಲ್ಲಿಯ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್ ತಂಡವನ್ನು 197 ರನ್ಗಳಿಂದ ಮಣಿಸುವ ಮೂಲಕ ತನ್ನ 500ನೇ ಟೆಸ್ಟ್ನ್ನು ಸ್ಮರಣೀಯವಾಗಿಸಿದೆ.
ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ೪೩೪ ರನ್ಗಳ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್, ಆರ್. ಅಶ್ವಿನ್ ಅವರ 5 ವಿಕೆಟ್ (132ಕ್ಕೆ 6)ಗಳ ಅಮೋಘ ಸಾಧನೆಯಿಂದಾಗಿ 236 ರನ್ಗಳಿಗೆ ಅಲೌಟ್ ಆಗಿದೆ.
93ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ನಸಿಲುಕಿದ್ದ ನ್ಯೂಜಿಲ್ಯಾಂಡ್ಗೆ ಮಿಚೆಲ್ ಸ್ಯಾಂಟ್ನರ್ (೭೧) ಮತ್ತು ಲ್ಯೂಕ್ ರಾಂಕಿ (೮೦) ಸ್ವಲ್ಪ ಮಟ್ಟಿಗೆ ನೆರವಾದರು.
ಪಂದ್ಯದಲ್ಲಿ ಒಟ್ಟು 92 ರನ್ ಗಳಿಸಿ 6 ವಿಕೆಟ್ ಪಡೆದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸಿಗೆ ಪಾತ್ರರಾದರು.
ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದ್ದು, ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಸೆಪ್ಟೆಂಬರ್ 30ರಿಂದ ಎರಡನೇ ಟೆಸ್ಟ್ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.