ವಡೋದರಾ : ವೈವಿಧ್ಯತೆ ಎನ್ನುವುದು ಭಾರತೀಯರಿಗೆ ಸಂಭ್ರಮಿಸುವ ವಿಚಾರ. ಅದೊಂದು ಸಮಸ್ಯೆಯೇ ಅಲ್ಲ. ಹೀಗೆಂದವರು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್.
ವಡೋಡರಾದ ದಾಂಡಿಯಾ ಬಜಾರ್ ಕಾಲೊನಿಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲ ಧರ್ಮಗಳ ಹಬ್ಬ, ಆಚರಣೆಗಳು ದೇಶದ ಏಕತೆಯನ್ನು ಮತ್ತಷ್ಟು ಬಲಪಡಿಸುತ್ತವೆ. ಸಂಕುಚಿತ ಮನೋಭಾವದವರು ವಿಶ್ವವನ್ನೇ ಬಣ್ಣ, ಭಾಷೆಯ ಆಧಾರದಲ್ಲಿ ಪ್ರತ್ಯೇಕಿಸುತ್ತಾರೆ. ಹೀಗಾಗಿ ಭಾರತೀಯರು ‘ವಸುದೈವ ಕುಟುಂಬಕಂ’ ಎಂಬ ಸಂದೇಶವನ್ನು ಜಗತ್ತಿಗೆ ಪಸರಿಸುವ ಅಗತ್ಯವಿದೆ ಎಂದರು.
ಸ್ವಾಮಿ ವಿವೇಕಾನಂದ, ಲೋಕಮಾನ್ಯ ತಿಲಕ್, ಮಹಾತ್ಮಾ ಗಾಂಧೀಜಿ ಅವರೂ ಶಿಕ್ಷಣ ವ್ಯವಸ್ಥೆ ಕುರಿತು ಅಸಮಾಧಾನ ಹೊಂದಿದ್ದರು. ಇದರ ಪರಿವರ್ತನೆಯಾಗಬೇಕು ಎಂದು ಸಾರಿದ್ದಾಗಿ ತಿಳಿಸಿದರು.
ವಿದೇಶೀಯರು ನಮ್ಮ ದೇಶದಲ್ಲಿ ಇಷ್ಟೊಂದು ವೈವಿಧ್ಯಮಯ ಸಂಸ್ಕೃತಿಯೊಂದಿಗೆ ಹೇಗೆ ಬದುಕುತ್ತಾರೆ ಎಂದು ಚಕಿತಗೊಳ್ಳುತ್ತಾರೆ. ಬ್ರಿಟಿಷರೂ ಇವರಿಗೆ ಸ್ವಾತಂತ್ರ್ಯ ಕೊಟ್ಟರೆ (ಭಾರತೀಯರು) ತಮ್ಮೊಳಗೆ ಹೊಡೆದಾಡಿಕೊಳ್ಳುತ್ತಾರೆ ಎಂದುಕೊಳ್ಳುತ್ತಿದ್ದರು ಎಂದರು ಭಾಗವತ್.
ಭಾಗವತ್ ಅವರನ್ನು ಅವರ 66ನೇ ಹುಟ್ಟುಹಬ್ಬ ನಿಮಿತ್ತ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಗುಜರಾತ್ ಕ್ರೀಡಾಸಚಿವ ರಾಜೇಂದ್ರ ತ್ರಿವೇದಿ, ಮೇಯರ್ ಭಾರತ್ ದಂಗಾರ ಸಮ್ಮುಖ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಸ್ವರ್ಣದಿಂದ ಮಾಡಿದ ಪವಿತ್ರ ದಾರವನ್ನು ಭಾಗವತ್ ಅವರು ದೇವರಿಗೆ ಅರ್ಪಿಸಿದರು. ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.