ಹನೋಯಿ : ವಿಯೆಟ್ನಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮತ್ತು ವಿಯೆಟ್ನಾಂ ಉಭಯ ದೇಶಗಳ ನಡುವೆ ಒಟ್ಟು 12 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಇದಕ್ಕೂ ಮುನ್ನ ಹನೋಯಿಯ ರಾಷ್ಟ್ರಾಧ್ಯಕ್ಷರ ಅಧಿಕೃತ ನಿವಾಸದಲ್ಲಿ ಪ್ರಧಾನಿ ಮೋದಿಯವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ಕೋರಲಾಯಿತು. 15 ವರ್ಷಗಳಲ್ಲಿ ವಿಯೆಟ್ನಾಂಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿಯಾದ ನರೇಂದ್ರ ಮೋದಿ, ತದನಂತರ ವಿಯೆಟ್ನಾಂನ ಜನಪ್ರಿಯ ನಾಯಕ ಹೊ ಚಿ ಮಿನ್ಹ್ ಗೆ ಗೌರವ ಅರ್ಪಿಸಿದ್ದಾರೆ.
ಮೋದಿ ಮತ್ತು ವಿಯೆಟ್ನಾಂ ಅಧ್ಯಕ್ಷರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಪ್ರಮುಖವಾಗಿ ರಕ್ಷಣಾ ಸಹಕಾರವನ್ನು ವೃದ್ಧಿಸಲು ಉಭಯ ರಾಷ್ಟ್ರಗಳು ಸಮ್ಮತಿಸಿದ್ದು, ವಿಯೆಟ್ನಾಂಗೆ ರಕ್ಷಣಾ ಕ್ಷೇತ್ರದಲ್ಲಿ ಬಳಕೆ ಮಾಡಲು ನೀಡುವ ಸಾಲವನ್ನು ಸುಮಾರು 3300 ಕೋಟಿ ರೂ. ಗೆ ಏರಿಕೆ ಮಾಡಲು ಭಾರತ ನಿರ್ಧರಿಸಿದೆ ಎನ್ನಲಾಗಿದೆ.
ಐಟಿ ಕ್ಷೇತ್ರ, ಬಾಹ್ಯಾಕಾಶ ತಂತ್ರಜ್ಞಾನ, ಗಸ್ತು ದೋಣಿ ನಿರ್ಮಾಣ, ತೆರಿಗೆ, ಸೇರಿದಂತೆ 12 ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಇದೇ ಸಂದರ್ಭ ಮೋದಿಯವರು ವಿಯೆಟ್ನಾಂನಲ್ಲಿರುವವರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದ್ದಾರೆ.
ಶನಿವಾರ ಸಂಜೆ ಮೋದಿಯವರು ಹ್ಯಾಂಗ್ಜೌಗೆ ತೆರಳಲಿದ್ದು, ಅಲ್ಲಿ ನಡೆಯಲಿರುವ ಜಿ-20 ಸಮಿತ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾನುವಾರ ಚೀನಾ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.