ಹೈದರಾಬಾದ್ : ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಇದೀಗ ದೇಶದ ಒಟ್ಟು 10 ನಗರಗಳು ಬಯಲುಶೌಚ ಮುಕ್ತ ನಗರಗಳು ಎಂಬ ಸರ್ಟಿಫಿಕೇಟ್ನ್ನು ಪಡೆದುಕೊಂಡಿದೆ.
ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ನಡೆಸಿದ ಸ್ವತಂತ್ರ ಸಮೀಕ್ಷೆಯಲ್ಲಿ ಮಹಾರಾಷ್ಟ್ರದ 5 ಮತ್ತು ತೆಲಂಗಾಣದ 5 ನಗರಗಳು ಬಯಲುಶೌಚ ಮುಕ್ತ ನಗರಗಳಾಗಿ ಹೊರಹೊಮ್ಮಿವೆ.
ಮುಂದಿನ ವರ್ಷ ದೇಶದ 974 ನಗರಗಳನ್ನು ಬಯಲುಶೌಚ ಮುಕ್ತಗೊಳಿಸುವ ಗುರಿಯನ್ನು ನಗರಾಭಿವೃದ್ಧಿ ಸಚಿವಾಲಯ ಹೊಂದಿದೆ.
ಮಹಾರಾಷ್ಟ್ರದ ಕಾಗಲ್, ಪಂಚಗನಿ, ವೆಂಗ್ರೂಲಾ, ಮುರಗುಡ್, ಪನ್ಹಲಾ ನಗರಗಳು ಮತ್ತು ತೆಲಂಗಾಣದ ಸಿದ್ದಿಪೇಟ್, ಶಡ್ನಗರ್, ಸೂರ್ಯಪೇಟ್, ಅಚಂಪೇಟ್, ಹುಝೂರ್ ನಗರ್ ಇವು ಸದ್ಯ ಬಯಲುಶೌಚ ಮುಕ್ತಗೊಂಡ ನಗರಗಳಾಗಿವೆ.
ದೇಶದ ಒಟ್ಟು 7 ರಾಜ್ಯಗಳ 147 ನಗರಗಳು ಪ್ರಸ್ತುತ ಬಯಲು ಶೌಚ ಮುಕ್ತ ನಗರಗಳು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿವೆ.
100 ನಗರಗಳು ಮಹಾರಾಷ್ಟ್ರದಲ್ಲೇ ಇವೆ. ಆದರೆ ಈ ನಗರಗಳ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಯುತ್ತಿದೆ.
ಸದ್ಯ 10 ನಗರಗಳು ಸರ್ಟಿಫಿಕೇಟ್ ಪಡೆದುಕೊಂಡಿದ್ದು ಮಾತ್ರವಲ್ಲ, ಗುಜರಾತಿನ ನಾಲ್ಕು ನಗರಗಳಾದ ಗಾಂಧಿಧಾಮ್, ನವಸರೈ, ರಾಪರ್, ಮಾಂಡವಿಗಳು ಸರ್ಟಿಫಿಕೇಟ್ಗಾಗಿ ಕಾಯುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.