ವ್ಯಾನ್ಕೋವರ್: ಭಾರತದ 100 ವರ್ಷದ ಮನ್ ಕೌರ್ ಅವರು ವ್ಯಾನ್ಕೋವರ್ನಲ್ಲಿ ನಡೆದ ಅಮೇರಿಕಾಸ್ ಮಾಸ್ಟರ್ಸ್ ಗೇಮ್ಸ್ಗೆ ಸ್ಫೂರ್ತಿಯಾಗಿದ್ದಾರೆ.
ಅವರು ಕೇವಲ ಒಂದೂವರೆ ನಿಮಷದಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸಿದ್ದಾರೆ.
ಮನ್ ಕೌರ್ ಅವರ ಪುತ್ರ 78 ವರ್ಷದ ಗುರುದೇವ್ ಸಿಂಗ್ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅವರ ಸಲಹೆಯಂತೆ ಮನ್ ಕೌರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಕೌರ್ ಅವರು ತಮ್ಮ 93ನೇ ವಯಸ್ಸಿನಲ್ಲಿ ಓಟದಲ್ಲಿ ಭಾಗವಹಿಸಲು ಆರಂಭಿಸಿದ್ದರು.
30 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳಿಗೆ ಈ ಅನನ್ಯ ಅಂತಾರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಲಾಗಿದ್ದು, ಕೌರ್ ಅವರ ಶಕ್ತಿ ಮತ್ತು ಯೋಜನೆ ಸ್ಫೂರ್ತಿಯಾಗಿದೆ ಎಂದು ಮನ್ ಕೌರ್ ಅವರ ಪುತ್ರ ಗುರುದೇವ್ ಹಾಗೂ ಇತರ ಕ್ರೀಡಾಪಟುಗಳು ಹೇಳಿದ್ದಾರೆ.
ಮನ್ ಕೌರ್ ಅವರು ಈವರೆಗೆ 20 ಪದಕಗಳನ್ನು ಗೆದ್ದುಕೊಂಡಿದ್ದು, ಕಳೆದ ಒಂದು ವಾರದಲ್ಲಿ 3 ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 100 ವರ್ಷ ಮೇಲ್ಪಟ್ಟ ಮಹಿಳಾ ಕ್ರೀಡಾಪಟುಗಳಲ್ಲಿ ಅವರು ಏಕೈಕ ಕ್ರೀಡಾಪಟು ಆಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.