ಸಿಡ್ನಿ : ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿಗೆ ಸಂಬಂಧಿಸಿದಂತೆ ಕೆಲ ಸೂಕ್ಷ್ಮ ಅಂಶಗಳು ಸೋರಿಕೆಯಾಗಿದ್ದು, ಇದನ್ನು ವಿನ್ಯಾಸ ಮಾಡಿದ ಫ್ರಾನ್ಸ್ನ ಡಿಸಿಎನ್ಎಸ್ ಕಂಪೆನಿ ದಾಖಲೆಗಳ ಸೋರಿಕೆ ಮಾಡಿದ ಆರೋಪಕ್ಕೆ ಗುರಿಯಾಗಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಬಹಿರಂಗಪಡಿಸಿದೆ.
ಭಾರತೀಯ ನೌಕಾ ದಳಕ್ಕೆ ಸೇರಿದ ಜಲಾಂತರ್ಗಾಮಿ ಇದಾಗಿದ್ದು, ಇದನ್ನು ಫ್ರಾನ್ಸ್ನ ಹಡಗು ನಿರ್ಮಾಣ ಕಂಪೆನಿಯಾದ ಡಿಸಿಎನ್ಎಸ್ ಕಂಪೆನಿ ವಿನ್ಯಾಸಗೊಳಿಸಿತ್ತು. ಅದನ್ನು ಮುಂಬೈಯ ಮಝೆಗಾನ್ ಬಂದರಿನಲ್ಲಿ ಇದನ್ನು ನಿರ್ಮಿಸಲಾಗಿತ್ತು. ಇದೀಗ ಆಸ್ಟ್ರೇಲಿಯಾ ಪತ್ರಿಕೆ ಈ ಜಲಾಂತರ್ಗಾಮಿಯ ಲೀಕ್ ಆದ 22,400 ಪುಟಗಳು ನನಗೆ ದೊರೆತಿದೆ ಎಂದಿದೆ.
ಈ ಡಾಟಾದಲ್ಲಿ ಜಲಾಂತರ್ಗಾಮಿಯ ಅತಿ ನಿಗೂಢ ಆಪರೇಟಿಂಗ್ ಮ್ಯಾನ್ಯುವಲ್ ಇದೆ ಎನ್ನಲಾಗಿದೆ.
ಮುಂಬೈನಲ್ಲಿ 3.5 ಬಿಲಿಯನ್ ಯೋಜನೆಯಡಿ ಸ್ಕಾರ್ಪಿನ್ ಜಲಾಂತರ್ಗಾಮಿ ರಚಿಸಲಾಗಿತ್ತು. ಇದು ಅತ್ಯಂತ ಅಡ್ವಾನ್ಸ್ಡ್ ತಂತ್ರಜ್ಞಾನವನ್ನು ಹೊಂದಿದ್ದು ಕ್ಲಿಷ್ಟಕರವಾದ ಸೈಲೆಂಟ್ ಅಂಡರ್ ವಾಟರ್ ಸಬ್ಮರೈನ್ ಇದಾಗಿದ್ದು ಡಿಟೆಕ್ಟ್ ಮಾಡಲು ಕಷ್ಟಕರವಾಗಿದೆ.
ಭಾರತದಿಂದಲೇ ಇದರ ಸೀಕ್ರೇಟ್ ಡಾಟಾಗಳು ಲೀಕ್ ಆಗಿರಬಹುದು ಡಿಸಿಎನ್ಎಸ್ ಕಂಪೆನಿ ಹೇಳಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಕೈಗೊಳ್ಳುವ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.