ನವದೆಹಲಿ : ಕಳೆದ ವರ್ಷ ಗುರುದಾಸ್ಪುರದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮೂವರು ಹೋಂಗಾರ್ಡ್ಗಳಿಗೆ ಈ ವರ್ಷ ರಾಷ್ಟ್ರಪತಿ ಶೌರ್ಯ ಪದಕವನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ.
ಈ ದಾಳಿಯಲ್ಲಿ ಮೃತರಾದ ಮುಂಬೈ ಫೈರ್ ಬ್ರಿಗೇಡ್ನ 5 ಅಧಿಕಾರಿಗಳಿಗೂ ಶೌರ್ಯ ಪದಕವನ್ನು ನೀಡಲಾಗುತ್ತಿದೆ.
ಭೋಧರಾಜ್, ದೇಶ್ ರಾಜ್, ಸುಖ್ದೇವ್ ಸಿಂಗ್ ಎಂಬವವರ ಹೆಸರನ್ನು ರಾಷ್ಟ್ರಪತಿ ಹೋಂಗಾರ್ಡ್ ಮತ್ತು ಸಿವಿಲ್ ಡಿಫೆನ್ಸ್ ಶೌರ್ಯ ಪದಕ ನೀಡಲು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಕಳೆದ ವರ್ಷ ಗುರುದಾಸ್ಪುರದ ಪೊಲೀಸ್ ಸ್ಟೇಷನ್ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯನ್ನು ತಡೆಯುವಲ್ಲಿ ಇವರು ಪಟ್ಟ ಪ್ರಯತ್ನವನ್ನು ಪರಿಗಣಿಸಿ ಇವರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸಲಾಗುತ್ತಿದೆ.
ಈ ಮೂವರು ಹೋಂಗಾರ್ಡ್ಗಳಾದರೂ ಇವರು ಮಾಡಿದ ಕಾರ್ಯ ಮತ್ತು ಇವರ ವೀರ ಮರಣ ಪಂಜಾಬ್ ಪೊಲೀಸ್ ಇಲಾಖೆಗೆ ಗೌರವ ಮತ್ತು ಹೆಮ್ಮೆ ತಂದಿದೆ. ಇವರ ಸ್ಮರಣಾರ್ಥ ಸ್ಮಾರಕವನ್ನೂ ನಿರ್ಮಿಸಲಿದ್ದೇವೆ ಎಂದು ಪಂಜಾಬ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.