ಬೀಜಿಂಗ್: ಚೀನಾ ಮುಂದಿನ ತಿಂಗಳು ಗರಿಷ್ಟ 380 ಕಿ.ಮೀ. ವೇಗಮಿತಿಯ ಜಗತ್ತಿನ ಅತೀ ವೇಗದ ರೈಲನ್ನು ಬಿಡುಗಡೆ ಮಾಡಲಿದೆ.
ಈ ಅತೀ ವೇಗದ ರೈಲು ಝೆಂಗ್ಝು-ಕ್ಸುಝು ಹೈ-ಸ್ಪೀಡ್ ರೈಲು ಮಾರ್ಗದಲ್ಲಿ ಚಲಿಸಲಿದೆ ಎಂದು ಪೀಪಲ್ಸ್ ಡೈಲಿ ಆನ್ಲೈನ್ ವರದಿ ಮಾಡಿದೆ.
ಈ ರೈಲು ಆರಂಭಗೊಂಡಲ್ಲಿ ಝೆಂಝು-ಕ್ಸುಂಝು ನಡುವಿನ ಪ್ರಯಾಣ ಸಮಯವು 2ಗಂಟೆ 33 ನಿಮಿಷದಿಂದ 80ಕ್ಕೆ ಇಳಿಕೆಯಾಗಲಿದೆ. ಈ ರೈಲಿನ ಗರಿಷ್ಟ ವೇಗ ಗಂಟೆಗೆ 400 ಕಿ.ಮೀ. ಇದ್ದು, 380 ಕಿ.ಮೀ. ವೇಗದಲ್ಲಿ ಚಲಿಸಲಿದೆ.
ಬೀಜಿಂಗ್-ಶಾಂಘಾಯ್ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಸುಮಾರು 16,000 ಕಿ.ಮೀ. ಹೈ-ಸ್ಪೀಡ್ ರೈಲು ಮಾರ್ಗವನ್ನು ಚೀನಾ ನಿರ್ಮಿಸಿದೆ.
ಆರ್ಥಿಕತೆ, ಮೂಲಸೌಕರ್ಯ ಬಂಡವಾಳ ಹೆಚ್ಚಿಸಲು ಚೀನಾ ಸರ್ಕಾರ ಇನ್ನಷ್ಟು ರೈಲು ಮಾರ್ಗಗಳನ್ನು ನಿರ್ಮಿಸಲಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.