ಆಕೆ 19 ವರ್ಷದ ತನ್ನ ಮಗನನ್ನು ರಸ್ತೆ ಅಪಘಾತವೊಂದರಲ್ಲಿ ಕಳೆದುಕೊಂಡವಳು. ಆದರೆ ನೋವಲ್ಲೂ ಮಗನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಪಡೆದವಳು.
ಆಕೆಯ ಕಾರ್ಯ ಇಷ್ಟಕ್ಕೇ ಸುಮ್ಮನಾಗಿಲ್ಲ. ದೇಶದಾದ್ಯಂತ ಅಂಗಾಂಗ ದಾನದ ಮಹತ್ವದ ಬಗ್ಗೆ ಅಭಿಯಾನ ಆರಂಭಿಸಿರುವ ಆಕೆ ನಿಜಕ್ಕೂ ಮಾದರಿ ತಾಯಿ ಎನಿಸಿದ್ದಾಳೆ.
ಇಂದು ತಮಿಳುನಾಡು ಮೂಲದ ಲಲಿತಾ ರಘುರಾಮ್ ಅಂಗಾಂಗ ದಾನದ ಬಗ್ಗೆ ಅಭಿಯಾನ ನಡೆಸುತ್ತಿರುವ ಮೋಹನ್ ಫೌಂಡೇಶನ್ನ ರಾಷ್ಟ್ರೀಯ ನಿರ್ದೇಶಕಿ. ರಸ್ತೆ ಅಪಘಾತಕ್ಕೊಳಾಗದ ಬಳಿಕ ಬ್ರೈನ್ ಡೆಡ್ ಆಗಿ ತನ್ನ ಮಗ ಮೃತನಾದ ಎಂದು ನೋವಿನಿಂದ ಹೇಳಿಕೊಳ್ಳುವ ಲಲಿತಾ, ಸತ್ತವರ ಅಂಗಾಂಗಳನ್ನು ದಾನ ಮಾಡಿ ಇತರರಿಗೆ ಜೀವ ನೀಡಿ ಎಂದು ಕರೆ ನೀಡುತ್ತಾರೆ.
ಎರಡನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಲಲಿತಾ ಅವರ ಮಗ ಸ್ವಾಮಿ ಪೊಂಗಲ್ ರಜೆಯ ಸಂದರ್ಭ ಮನೆಗೆ ಬಂದಿದ್ದಾಗ 2004 ರ ಜನವರಿ 13 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಸ್ನೇಹಿತರೊಂದಿಗೆ ಹೊರಹೋಗಿದ್ದ. ಈ ವೇಳೆ ರಸ್ತೆ ಅಪಘಾತ ಸಂಭವಿಸಿ ಆತ ಮತ್ತು ಅತನ ಸ್ನೇಹಿತನೊಬ್ಬ ಮೃತರಾದರು.
ಮೃತ ಪಟ್ಟ ಇತರರ ಬ್ರೈನ್ ಅನ್ನು ತನ್ನ ಮಗನಿಗೆ ಟ್ರಾನ್ಸ್ಪ್ಲಾಂಟ್ ಮಾಡಿಸಿದ್ದಿದ್ದರೆ ಆತನನ್ನು ಬದುಕುಳಿಸಬಹುದಿತ್ತು. ಆದರೆ ದಾನಿಗಳು ಸಿಗದ ಹಿನ್ನಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಇಂತಹ ಸ್ಥಿತಿ ಬೇರೆಯವರಿಗೂ ಬರಬಾರದು ಎಂಬ ಉದ್ದೇಶದಿಂದ ಅಂಗಾಂಗ ದಾನದ ಮಹತ್ವದ ಬಗ್ಗೆ ಆಭಿಯಾನ ನಡೆಸಲಾರಂಭಿಸಿದೆ ಎಂದು ಲಲಿತಾ ಹೇಳುತ್ತಾರೆ.
ಇವರು ತಮ್ಮ ಮಗನ ಕಿಡ್ನಿ, ಲಿವರ್, ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದರಿಂದ ನನ್ನ ಮಗನು ಐದು ಮಂದಿಯ ಜೀವದಲ್ಲಿ ಜೀವಂತವಾಗಿದ್ದಾನೆ ಎಂಬ ಭಾವನೆ ಅವರಿಗೆ ಮೂಡುತ್ತದೆ.
ಲಲಿತಾ ಮತ್ತು ಅವರ ಪತಿ ಹಲವಾರು ಕುಟುಂಬಗಳನ್ನು ಅಂಗಾಂಗ ದಾನ ಮಾಡಲು ಪ್ರೇರೇಪಿಸಿ ಯಶಸ್ವಿಯಾಗಿದ್ದಾರೆ.
ಈ ಬಗೆಗಿನ ಹಲವಾರು ಅಭಿಯಾನಗಳಲ್ಲಿ ಪಾಲ್ಗೊಂಡು ಜನರಿಗೆ ಅರಿವನ್ನೂ ಮೂಡಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.