ಮುಂಬಯಿ: ಅಹ್ಮದಾನಗರ್ನಲ್ಲಿ ನಡೆದ ಬಾಲಕಿಯ ಮೇಲಿನ ಅಮಾನುಷ ಗ್ಯಾಂಗ್ರೇಪ್ ಮತ್ತು ಕೊಲೆ ಪ್ರಕರಣ ಮಹಾರಾಷ್ಟ್ರ ಸರ್ಕಾರ ಜನರ ಆಕ್ರೋಶಕ್ಕೀಡಾಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅಲ್ಲಿನ ಸಿಎಂ ದೇವೇಂದ್ರ ಫಡ್ನವಿಸ್ ಮರಣದಂಡನೆಯೊಂದೇ ರೇಪ್ ಪ್ರಕರಣದಲ್ಲಿ ಸರಿಯಾದ ಉತ್ತಮ ಸಂದೇಶವನ್ನು ರವಾನಿಸಬಲ್ಲದು ಎಂದು ಅಭಿಪ್ರಾಯಿಸಿದ್ದಾರೆ.
‘ಬಾಲಕಿಯ ಅತ್ಯಾಚಾರ ಘನಘೋನ ಅಪರಾಧ, ಡಿಎನ್ಎ ಸಾಕ್ಷಿ ವೈಜ್ಞಾನಿಕ ಸಾಕ್ಷಿಯಾಗಿದ್ದು ಆರೋಪಿಗಳ ಪತ್ತೆಯಲ್ಲಿ ಸಹಾಯ ಮಾಡಲಿದೆ. ಮುಂದಿನ 4 ರಿಂದ 6 ದಿನಗಳೊಳಗೆ ಫೊರೆನ್ಸಿಕ್ ತಜ್ಞರ ತಂಡ ಪ್ರರಣವನ್ನು ಚಾರ್ಜ್ಶೀಟ್ ಹಂತಕ್ಕೆ ತರುವಲ್ಲಿ ಯಶಸ್ವಿಯಾಗಲಿದ್ದಾರೆ’ ಎಂದು ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಅಲ್ಲದೇ ಮರಣದಂಡನೆ ನೀಡುವುದೇ ಅತ್ಯಾಚಾರಿಗಳ ತಕ್ಕುದಾದ ಶಿಕ್ಷೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅತ್ಯಾಚಾರ ಪ್ರಕರಣ ಮಹಾರಾಷ್ಟ್ರದ ಉಭಯ ಸದನಗಳಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.