ವಿಶ್ವ ಸಂಸ್ಥೆ: ವಿಶ್ವ ಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನದ ಸ್ಮರಣಾರ್ಥವಾಗಿ 2017ರಲ್ಲಿ ಯೋಗ ಸ್ಟ್ಯಾಂಪ್ಗಳನ್ನು ವಿತರಿಸುವ ಯೋಜನೆ ಹೊಂದಿದೆ ಎಂದು ವಿಶ್ವಸಂಸ್ಥೆಯ ಪೋಸ್ಟಲ್ ಆಡಳಿತವು ಟ್ವೀಟ್ ಮಾಡಿದೆ.
ಪ್ರತಿ ವರ್ಷ ಜೂನ್ 21ರಂದು ಯೋಗ ದಿನ ಆಚರಿಸಲಾಗುತ್ತಿದ್ದು, 2014ರಲ್ಲಿ ವಿಶ್ವ ಯೋಗ ದಿನ ಆಚರಿಸುವ ಭಾರತದ ಪ್ರಸ್ತಾಪವನ್ನು ವಿಶ್ವ ಸಂಸ್ಥೆ ಸ್ವೀಕರಿಸಿತ್ತು.
ಯೋಗ ಸ್ಟ್ಯಾಂಪ್ಗಳು ನ್ಯೂಯಾರ್ಕ್, ಜಿನೇವಾ, ವಿಯೆನ್ನಾಗಳಲ್ಲಿರುವ ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ಕಚೇರಿಗಳಲ್ಲಿ ಏಕಕಾಲದಲ್ಲಿ ನೀಡಲಾಗುವುದು. ಪ್ರತಿ ಬಾರಿಯ ವಿತರಣೆಗೆ ಪ್ರತ್ಯೇಕ ಸ್ಟ್ಯಾಂಪ್ ವಿನ್ಯಾಸ ಇರಲಿದ್ದು, ಪ್ರತಿ ಕಚೇರಿಗೂ ಪ್ರತ್ಯೇಕ ಗುರುತು ಇರಲಿದೆ.
ಪ್ರತಿ ವರ್ಷ 6 ವಿವಿಧ ಸ್ಮರಣಾರ್ಥ ಸ್ಟ್ಯಾಂಪ್ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ವರ್ಷದಲ್ಲಿ ಕೇವಲ 12 ತಿಂಗಳು ಮಾರಾಟ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.