ನವದೆಹಲಿ : ದೇಶಾದ್ಯಂತ ನಗರಗಳಲ್ಲಿ 20 ಡಿಡಿ ಚಾನೆಲ್ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕೆಂಬ ನೀತಿ ಜಾರಿಗೊಳಿಸಲು ಕೇಂದ್ರ ನಿರ್ಧರಿಸಿದೆ.
ದೇಶಾದ್ಯಂತ ಡಿಜಿಟಲೀಕರಣಗೊಂಡಿರುವ ನಗರಗಳು, ಡಿಜಿಟಲೀಕರಣಗೊಳ್ಳುತ್ತಿರುವ ನಗರಗಳಲ್ಲಿ 20 ಡಿಡಿ ಚಾನೆಲ್ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕೆಂದು ಸ್ಥಳೀಯ ಕೇಬಲ್ ಆಪರೇಟರ್ಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತೀರ್ಮಾನಿಸಿದೆ.
ಅವಶ್ಯವಾಗಿ ಪ್ರಸಾರವಾಗಿರಬೇಕಾದ ಡಿಡಿ ಚಾನೆಲ್ಗಳು ತಂತ್ರಜ್ಞಾನ ಮುಂದುವರೆದಿದ್ದರೂ ಪ್ರಸಾರವಾಗುತ್ತಿಲ್ಲ. ನಿಯಮಾವಳಿಗಳ ಪ್ರಕಾರ ಟಿವಿಯಲ್ಲಿ ಪ್ರಸಾರವಾಗುವ ದೂರದರ್ಶನ ಮತ್ತು ಎಲ್ಲಾ ಚಾನೆಲ್ಗಳ ಮಾಹಿತಿಯನ್ನು ಕೇಬಲ್ ಆಪರೇಟರ್ಗಳು ತೋರಿಸಬೇಕು. ಡಿಜಿಟಲೀಕರಣಗೊಂಡಿರುವ ನಗರಗಳಲ್ಲಿ 20 ಡಿಡಿ ಚಾನೆಲ್ಗಳನ್ನು ಒಳಗೊಂಡಂತೆ, ರಾಜ್ಯಸಭಾ, ಲೋಕಸಭಾ ಚಾನೆಲ್ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಲೇಬೇಕು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಈಗಾಗಲೇ ಸಚಿವಾಲಯವು ಅಧಿಸೂಚನೆ ಹೊರಡಿಸಿತ್ತು. ಆದರೂ ಡಿಡಿ ಚಾನೆಲ್ಗಳ ಪ್ರಸಾರವಾಗುತ್ತಿಲ್ಲ. ಈ ಹಿಂದೆಯೂ ಈ ಕುರಿತು ಚರ್ಚಿಸಲಾಗಿದೆ. ಹೀಗಾಗಿ ಇದೀಗ ಕಠಿಣವಾಗಿ ಕಡ್ಡಾಯದ ನೀತಿಯನ್ನು ಅನುಸರಿಸಲು ಸೂಚಿಸಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.