ಮ್ಯಾಡ್ರಿಡ್: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ಸಿಲೋನಾದ ಖ್ಯಾತ ಫುಟ್ಬಾಲ್ ಆಟಗಾರ, ಅರ್ಜೆಂಟಿನಾದ ಲಯೋನೆಲ್ ಮೆಸ್ಸಿಗೆ ಬಾರ್ಸಿಲೋನಾ ಕೋರ್ಟ್ 21 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಸ್ಪೈನ್ ತೆರಿಗೆ ಇಲಾಖೆ ಮೆಸ್ಸಿಗೆ 2.2 ಮಿಲಿಯನ್ ಡಾಲರ್ (2 ಮಲಿಯನ್ ಯೂರೋ) ಹಾಗೂ ಆತನ ತಂದೆ ಜಾರ್ಜ್ ಹೊರೆಶಿಯೋ ಮೆಸ್ಸಿಗೆ 2.4 ಮಿಲಿಯನ್ ಡಾಲರ್ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿದೆ.
ತನ್ನ ಆರ್ಥಿಕ ವ್ಯವಹಾರಗಳನ್ನು ತಂದೆ ಹೊರೆಶಿಯೋ ನಿರ್ವಹಿಸುತ್ತಿದ್ದು, ಈ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಐದು ಬಾರಿಯ ವರ್ಷದ ಆಟಗಾರ ಪ್ರಶಸ್ತಿ ವಿಜೇತ ಮೆಸ್ಸಿ ಹೇಳಿದ್ದಾರೆ.
ಮೆಸ್ಸಿ ತಂದೆ ಹೊರೆಶಿಯೋ ಆದಾಯ ತೆರಿಗೆ ಕಡಿಮೆ ಮಾಡಲು ಸ್ವಿಜಲ್ಯಾಂಡ್, ಉರುಗ್ವೆ ಮತ್ತು ಬೆಲಿಜ್ ರಾಷ್ಟ್ರಗಳ ವೆಬ್ ಕಂಪೆನಿಗಳನ್ನು ಬಳಸಿದ್ದರು ಎನ್ನಲಾಗಿದೆ.
ಸ್ಪೇನ್ ಕಾನೂನು ಪ್ರಕಾರ ಅಪರಾಧಿಗೆ ಮೊದಲ ಬಾರಿಗೆ 2 ವರ್ಷಕ್ಕಿಂತ ಕಡಿಮೆ ಅವಧಿಗೆ ಜೈಲು ಶಿಕ್ಷೆಯಾದರೆ ಆತ ಜೈಲಿಗೆ ಹೋಗಬೇಕೆಂದಿಲ್ಲ.
ಈ ನಡುವೆ ಪ್ರತಿಪಾದಿಗಳು ಸುಪ್ರೀಂ ಕೋರ್ಟ್ಗೆ ಮನವಿ ಮಾಡಬಹುದು ಎಂದು ಬಾರ್ಸಿಲೋನಾ ನ್ಯಾಯಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.