ಡೆಹ್ರಾಡೂನ್: ಚಾರ್ಧಾಮ್ ಯಾತ್ರೆ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡುತ್ತೇನೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ತಿಳಿಸಿದ್ದಾರೆ.
ಅಲ್ಲದೇ ಮಾನಸ ಸರೋವರ ಯಾತ್ರೆಯ ಸಾಂಪ್ರದಾಯಿಕ ಮಾರ್ಗವನ್ನು ಪುನರ್ ತೆರೆಯುವ ಸಮಾರಂಭಕ್ಕೂ ಮೋದಿಗೆ ಆಹ್ವಾನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಹಿಂದೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೂ ಚಾರ್ಧಾಮ ಯಾತ್ರೆಕೈಗೊಳ್ಳಲು ಆಹ್ವಾನ ನೀಡಿದ್ದೆವು. ಆದರೆ ಕಾರಣಾಂತರಗಳಿಂದ ಅವರ ಯಾತ್ರೆ ರದ್ದುಗೊಂಡಿದೆ. ಆದರೆ ಮೇ 18ರಂದು ಅವರು ನಮ್ಮ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ ಕೇದಾರನಾಥ ಯಾತ್ರೆ ಕೈಗೊಂಡ ರಾಹುಲ್ ಗಾಂಧಿಯವರಿಗೆ ಅವರು ಧನ್ಯವಾದ ಸಮರ್ಪಿಸಿದ್ದಾರೆ.
2013ರ ಮಹಾ ದುರಂತದ ಬಳಿಕ ಚಾರ್ಧಾಮ್ ಯಾತ್ರೆ ಕೈಗೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜನರ ಭಯವನ್ನು ಹೋಗಲಾಡಿಸಲು ಮತ್ತು ಯಾತ್ರೆಗೆ ಪ್ರಚಾರ ಸಿಗುವಂತೆ ಮಾಡಲು ಗಣ್ಯರಿಗೆ ಯಾತ್ರೆ ಕೈಗೊಳ್ಳುವಂತೆ ಆಹ್ವಾನಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.