ಪುಣೆ ಮೂಲದ ರುದ್ರ ಎನ್ವೈರ್ನ್ಮೆಂಟಲ್ ಸೊಲ್ಯೂಷನ್ಸ್ ಸಮಸ್ಥೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಪಾಲಿ-ಇಂಧನವನ್ನಾಗಿ ಮಾರ್ಪಡಿಸುತ್ತಿದೆ.
ರುದ್ರ ಸಂಸ್ಥೆಯ ಸಂಸ್ಥಾಪಕಿ ಮೇಧಾ ತಡ್ಪತ್ರಿಕರ್ ಮತ್ತು ಅವರ ತಂಡ ರುದ್ರ ಸ್ಥಾವರದಲ್ಲಿ ಪಾಲಿ ಇಂಧನ ಉತ್ಪಾದನಾ ಯಂತ್ರಗಳನ್ನು ಅಭಿವೃದ್ಧಿಪಡಿಸಿ ತಯಾರಿಸಿದ್ದಾರೆ. ಈ ಯಂತ್ರಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಿಯಲ್ಲಿ ಕರಗಿಸಿ ಪೈರೋಲಿಸಿಸ್ ಪ್ರಕ್ರಿಯೆ ಮೂಲಕ ಪಾಲಿ-ಇಂಧನವನ್ನಾಗಿ ಪರಿವರ್ತಿಸುತ್ತವೆ.
ಈ ಸಂಸ್ಥೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಪ್ಲಾಸ್ಟಿಕ್ ಕೈಚೀಲ, ಬಾಟಲ್ಗಳು, ಕೇಬಲ್ ಕವರ್ಗಳನ್ನು ಸಂಗ್ರಹಿಸಿ ಇಂಧನ, ಅನಿಲ ಮತ್ತು ಜಿಡ್ಡು ಮಣ್ಣನ್ನಾಗಿ ಪರಿವರ್ತಿಸಲಾಗುತ್ತದೆ.
ಸಂಸ್ಥೆಯ ಸಂಸ್ಥಾಪಕಿ ಮೇಧಾ ಅವರು ಮಹಾರಾಷ್ಟ್ರದ ಥಾಣೆಯಲ್ಲಿ ಪ್ಲಾಸ್ಟಿಕ್ಗಳನ್ನು ತಿಂದು ೨ ಜಿಂಕೆಗಳು ಮೃತಪಟ್ಟಿರುವುದದನ್ನು ಕಂಡಿದ್ದು, ಆ ಬಳಿಕ 2009ರಲ್ಲಿ ಈ ಯೋಜನೆ ಮೂಲಕ ಸಂಸ್ಥೆ ಸ್ಥಾಪಿಸಿದ್ದರು.
ಸಂಸ್ಥೆಯು ಜನರಿಗೆ ಮರುಬಳಕೆ ಪ್ಲಾಸ್ಟಿಕ್ ಚೀಲಗಳನ್ನು ನೀಡುತ್ತಿದ್ದು, ಗೃಹೋಪಯೋಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶೇಖರಿಸಿಡಲು ಹೇಳಿದೆ. ಈ ತ್ಯಾಜ್ಯಗಳನ್ನು ನಿಯಮಿತ ಕಾಲಾವಧಿಯಲ್ಲಿ ಸಂಸ್ಥೆ ಸಂಗ್ರಹಿಸುತ್ತದೆ. ಈಗ ಈ ಸಂಸ್ಥೆ ಪುಣೆಯ ಸುಮಾರು 5,500 ಮನೆಗಳಿಂದ ಮಾಸಿಕ 5-6 ಟನ್ಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸುತ್ತದೆ.
ಪಾಲಿ-ಇಂಧನ ಅತೀ ಹೆಚ್ಚು ಕ್ಯಾಲೋರಿ ಮೌಲ್ಯ ಹೊಂದಿದ್ದು, ಇದು ಡೀಸೆಲ್, ಪೆಟ್ರೋಲ್ ಮತ್ತು ಸೀಮೆ ಎಣ್ಣೆಯ ಮಿಶ್ರಣವಾಗಿದೆ. ಇದನ್ನು ಬಾಯ್ಲರ್, ಸ್ಟವ್ಗಳು, ಕೃಷಿ ಸಂಸ್ಥೆ, ಕುಲುಮೆಗಳಲ್ಲಿ ಬಳಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.