ಮಂಗಳೂರು: ಕ್ಯಾನ್ಸರ್ ಚಿಕಿತ್ಸೆಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಮೂಳೆ ಕ್ಯಾನ್ಸರ್ಗೆ ಮಲ್ಟಿಮಾಡೆಲ್ ದೃಷ್ಠಿಕೋನದ ಅಗತ್ಯದ ಬಗ್ಗೆ ಅರಿವು ಮೂಡಿಸುವ ಸಂಬಂಧ, ಕ್ಯಾನ್ಸರ್ ಚಿಕಿತ್ಸೆ ತಜ್ಞತೆ ಹೊಂದಿರುವ ಎಚ್ಸಿಜಿ, ತಜ್ಞ ವೈದ್ಯರೊಂದಿಗೆ, ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯನ್ನು ಏರ್ಪಡಿಸಿತ್ತು.
ಈ ಮಲ್ಟಿಮಾಡೆಲ್ ದೃಷ್ಠಿಕೋನ ಎರಡು ಚಿಕಿತ್ಸಾ ವಿಧಾನಗಳನ್ನು, ಅದರಲ್ಲಿಯೂ ಮುಖ್ಯವಾಗಿ ಶಸ್ತ್ರಚಿಕಿತ್ಸೆ, ಕಿಮೊಥೆರಪಿ ಹಾಗೂ ವಿಕಿರಣಗಳ ನಿರ್ವಹಣೆಯನ್ನು ಒಳಗೊಂಡಿದೆ. ಈ ವಿಧಾನ, ರೋಗಿಗಳಿಗೆ ಕೇವಲ ಬದುಕುಳಿಯುವ ಸಂಭವವನ್ನು ಸುಧಾರಿಸುವುದಷ್ಟೇ ಅಲ್ಲದೆ, ಜೀವಿಸುವ ಗುಣಮಟ್ಟವನ್ನೂ ಹೆಚ್ಚಿಸುತ್ತದೆ. ಪ್ರತಿಯೊಂದು ವ್ಯಕ್ತಿಗತ ಚಿಕಿತ್ಸಾ ಆಯ್ಕೆಯೂ ರೋಗಿಗಳ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುವಂತಹ ಸಾಮರ್ಥ್ಯವನ್ನು ಹೊಂದಿದ್ದರೂ ಸಹ ಸೂಚನೆಗಳನ್ನು ನಿಯಂತ್ರಿಸಲು ಹಾಗೂ ಗಡ್ಡೆಗಳನ್ನು ಕಡಿಮೆಗೊಳಿಸಲು ಅಥವಾ ತೆಗೆದುಹಾಕಲು ವೈದ್ಯರು ಬಹು ಚಿಕಿತ್ಸೆಗಳನ್ನು ಒದಗಿಸುತ್ತಾರೆ. ಚಿಕಿತ್ಸಾ ಅಧ್ಯಯನಗಳು ಮಲ್ಟಿಮಾಡೆಲ್ ದೃಷ್ಠಿಕೋನದಿಂದ ಮಾತ್ರ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದೆಂದು ಸಾಬೀತುಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಎಚ್ಸಿಜಿಯ, ಆರ್ಥೊ ಆಂಕಾಲಜಿ (ಮೂಳೆ ಕ್ಯಾನ್ಸರ್) ಸಲಹಾಗಾರ ಡಾ. ಪ್ರಮೋದ್ ಚಿಂದರ್ ಅವರು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಹಾಗೂ ಸಂಶೋಧನೆ ಪ್ರಗತಿಯನ್ನು ಸಾಧಿಸುತ್ತಿದ್ದು, ಅವುಗಳ ಬಗ್ಗೆ ಮಾಹಿತಿಯನ್ನು ಹೊಂದಿರುವುದು ನಮಗೆ ಅಗತ್ಯ. ಎಚ್ಸಿಜಿಯಲ್ಲಿ ಸಾರ್ಕೊಮಾ ರೋಗಿಗಳಿಗೆ, ಪಾಶ್ಚಿಮಾತ್ಯ ದೇಶಗಳಲ್ಲಿರುವಂತೆ ಅಥವಾ ಅದಕ್ಕಿಂತಲೂ ಮಹತ್ವಾದ ಆಧುನಿಕ ಚಿಕಿತ್ಸೆಗಳು ಲಭ್ಯವಿದೆ.
ಭಾರತದಲ್ಲಿ ಮೊದಲ ಬಾರಿಗೆ ಕಂಪ್ಯೂಟರ್ ಸಹಾಯದೊಂದಿಗೆ ನಡೆಸಿದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಎಚ್ಸಿಜಿಯಲ್ಲಿ ನಡೆದಿತ್ತು. ಅದೇ ರೀತಿ ಈಗ ಮೂಳೆ ಕ್ಯಾನ್ಸರ್ನಿಂದ ಬಳಲುತ್ತಿದ್ದಂತಹ ಇಲ್ಲಿರುವ ರೋಗಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವಿವರಿಸಿದರು.
475 ಆಂಕಾಲಜಿಸ್ಟ್ಗಳು (ಗ್ರಂಥಿಶಾಸ್ತ್ರಜ್ಞರು) ಎಚ್ಸಿಜಿ ಸಮೂಹದ ಭಾಗವಾಗಿದ್ದು, ಈ ಪ್ರಕಾರ ಆಂಕಾಲಜಿಸ್ಟ್ಗಳು, ನ್ಯೂರೊಸರ್ಜನ್ಗಳು (ನರರೋಗ ತಜ್ಞರು), ತಲೆ ಹಾಗೂ ಕುತ್ತಿಗೆ ಶಸ್ತ್ರಚಿಕಿತ್ಸಕರು, ಗ್ಯಾಸ್ಟ್ರೊಎಂಟಿರಾಲಜಿಸ್ಟ್ಗಳು (ಜಠರ ರೋಗಗಳಿಗೆ ಸಂಬಂಧಪಟ್ಟ ವೈದ್ಯರು), ಮೂತ್ರರೋಗ ತಜ್ಞರು ಹಾಗೂ ಎಲುಬಿನ ಕ್ಯಾನ್ಸರ್ ತಜ್ಞರು ಒಳಗೊಂಡಂತೆ ಅನುಭವಿ ತಂಡ ಎಚ್ಸಿಜಿ ಕುಟುಂಬವನ್ನು ಬೆಂಬಲಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.