ದುಬೈ: ಸೌದಿ ಅರೇಬಿಯಾದ ಹಜ್ ಯಾತ್ರೆಗೆ ತೆರಳಲಿರುವ ಮುಸ್ಲಿಂ ಯಾತ್ರಿಗಳು ಎಲೆಕ್ಟ್ರಾನಿಕ್ ಸುರಕ್ಷತೆ ಬ್ರೇಸ್ಲೆಟ್ ಧರಿಸಬೇಕಿದೆ. ಅಧಿಕಾರಿಗಳು ಜನರ ರಕ್ಷಣೆ ಮತ್ತು ಅವರನ್ನು ಗುರುತಿಸುವಿಕೆಗೆ ಈ ಕ್ರಮ ಕೈಗೊಂಡಿದ್ದಾರೆ ಎಂದು ಅರಬ್ ನ್ಯೂಸ್ ಹಾಗೂ ಸೌದಿ ಗೆಜೆಟ್ ವರದಿ ಮಾಡಿವೆ.
ಈ ಬ್ರೇಸ್ಲೆಟ್ ವಾಟರ್ ರೆಸಿಸ್ಟೆಂಟ್ (ನೀರು ನಿರೋಧಕ)ವಾಗಿದ್ದು, ಜಿಪಿಎಸ್ ಲೊಕೇಷನ್ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಲಿದೆ. ಇದರಲ್ಲಿ ಪ್ರತಿ ಯಾತ್ರಿಗಳ ವಿಳಾಸ, ವೈದ್ಯಕೀಯ ದಾಖಲೆಗಳ ಮಾಹಿತಿಗಳನ್ನು ಸಂಗ್ರಹಿಸಿಡಲಾಗುವುದು ಎಂದು ಪತ್ರಿಕಾ ವರದಿ ತಿಳಿಸಿದೆ.
2015ರ ಸೆಪ್ಟೆಂಬರ್ 24 ರಂದು ಸುಮಾರು 2,297 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಜನರನ್ನು ಗುರುತಿಸಲು ಸುಲಭವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರಿಕೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.