ಬೆಂಗಳೂರು : ಬೆಂಗಳೂರು ರೈಲ್ವೆ ವಿಭಾಗದ ಪರಿಧಿಯಲ್ಲಿ ಬರುವ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಶನಿವಾರದಿಂದ ಮಕ್ಕಳು – ಶಿಶುಗಳಿಗೆ ಆಹಾರ ಪದಾರ್ಥಗಳು ದೊರಕಲಿದೆ. ಇದರಿಂದ ಶಿಶು/ಮಕ್ಕಳನ್ನು ಹೊಂದಿರುವ ಪ್ರಯಾಣಿಕರ ಚಿಂತೆ ದೂರವಾಗಲಿದೆ.
ಶಿಶುಗಳಿಗೆ ಆಹಾರ ತಯಾರಿಸಲು ಬಿಸಿ ನೀರು, ಸೆರಿಲ್ಯಾಕ್, ನೆಸ್ಲೆ, ಕಾಂಪ್ಲೇನ್, ಬಿಸಿ ಹಾಲು ಸೇರಿದಂತೆ ಮಕ್ಕಳಿಗೆ ಬೇಕಾಗುವ ಆಹಾರ ಪದಾರ್ಥಗಳು ಇನ್ನು ರೈಲ್ವೆ ನಿಲ್ದಾಣಗಳಲ್ಲಿ ದೊರಯಲಿದೆ.
‘ಜನನಿ ಸೇವಾ’ ಎನ್ನುವ ಯೋಜನೆಯಡಿ ರೈಲ್ವೆಯು ನೂತನವಾಗಿ ಆರಂಭಿಸಿದ ಯೋಜನೆ ಇದಾಗಿದೆ. ದೂರದೂರಿಗೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಮಕ್ಕಳಿಗೆ / ಶಿಶುಗಳಿಗೆ ಆಹಾರದ ಕೊರತೆ ಆಗಬಾರದು. ತಾಯಂದಿರಿಗೆ ಅನುಕೂಲವಾಗುವಂತೆ ಈ ಉಪಕ್ರಮವನ್ನು ದಕ್ಷಿಣ ಮಧ್ಯ ರೈಲ್ವೆ ವಿಭಾಗದಡಿ ಬರುವ ಮುಖ್ಯ ನಿಲ್ದಾಣಗಳಲ್ಲಿ ಮಕ್ಕಳಿಗೆ ಬೇಕಾಗುವ ಬಿಸಿ ಹಾಲು, ಆಹಾರ ಪದಾರ್ಥಗಳು, ಬಿಸಿ ನೀರು ಇವೆಲ್ಲವೂ ದೊರಕಲಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಇದರಂತೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್, ಯಶವಂತಪುರ, ಕೆ. ಆರ್. ಪುರಂ, ವೈಟ್ ಫೀಲ್ಡ್, ಕಂಟೋನ್ಮೆಂಟ್, ಬೈಯ್ಯಪ್ಪನಹಳ್ಳಿ, ಮಂಡ್ಯ, ಬಂಗಾರಪೇಟೆ, ಹೊಸೂರು ಮತ್ತು ರಾಮನಗರ ನಿಲ್ದಾಣಗಳಲ್ಲಿ ಈ ಸೌಲಭ್ಯವು ದೊರಕಲಿದೆ ಎಂದು ಹಿರಿಯ ವಲಯ ವಾಣಿಜ್ಯ ವ್ಯವಸ್ಥಾಪಕರಾದ ಶ್ರೀಧರಮೂರ್ತಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.