ಮುಂಬಯಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ 57 ಅಭ್ಯರ್ಥಿಗಳಲ್ಲಿ 21 ಮಂದಿಯ ಶಾರ್ಟ್ ಲಿಸ್ಟ್ ಮಾಡಿದೆ.
ಕೋಚ್ ಹುದ್ದೆಗೆ ಅತ್ಯುತ್ತಮ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಕ್ರಿಕೆಟ್ ಮಂಡಳಿ ಮೂವರು ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅರನ್ನೊಳಗೊಂಡ ಸಲಹಾ ಸಮಿತಿಯನ್ನು ರಚಿಸಿದೆ.
ಆಯ್ಕೆ ಸಮಿತಿಯ ಮುಖ್ಯ ಸಂಯೋಜಕ ಸಂಜಯ್ ಜಗದಲೆ ಮತ್ತು ಸಲಹಾ ಸಮಿತಿಯು 21 ಅಭ್ಯರ್ಥಿಗಳಲ್ಲಿ ಅರ್ಹ ಅಭ್ಯರ್ಥಿಯ ಆಯ್ಕೆ ಮಾಡಲಿದೆ.
ರವಿ ಶಾಸ್ತ್ರಿ, ಅನಿಲ್ ಕುಂಬ್ಳೆ ಹಾಗೂ ಸಂದೀಪ್ ಪಾಟಿಲ್ ಮೊದಲ ಮೂವರು ಪ್ರಮುಖ ಫೇವರಿಟ್ಗಳಾಗಿದ್ದಾರೆ. ಆದರೆ ಕೇವಲ ಐಪಿಎಲ್ಗಳಲ್ಲಿ ಕೋಚ್ ಹುದ್ದೆ ನಿರ್ವಹಿಸಿರುವ ಅನಿಲ್ ಕುಂಬ್ಳೆ, ಅನುಭವದ ಕೊರತೆ ಹಾಗೂ ಆರ್ಸಿಬಿ ಮತ್ತು ಮುಂಬಯಿ ತಂಡದ ಕೋಚ್ ನಿರ್ವಹಣೆ ವೇಳೆ ತಂಡಗಳ ನೀರಸ ಪ್ರದರ್ಶನದಿಂದಾಗಿ ಹಿಂದುಳಿಯಲಿದ್ದಾರೆ ಎನ್ನಲಾಗಿದೆ.
ಕೋಚ್ ಹುದ್ದೆಗೆ ಇನ್ನುಳಿದ ಪ್ರಮುಖರೆಂದರೆ ವೆಂಕಟೇಶ್ ಪ್ರಸಾದ್, ಬಲ್ವಿಂದರ್ ಸಂಧು ಹಾಗೂ ಹೃಷಿಕೇಶ್ ಕಾನಿಟ್ಕರ್.
ಪ್ರಥಮ ದರ್ಜೆ ಅಥವಾ ಐಸಿಸಿ ಸದಸ್ಯ ರಾಷ್ಟ್ರಗಳ ಯಾವುದೇ ತಂಡದ ತರಬೇತುದಾರರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿರಬೇಕೆಂಬುವುದು ಕ್ರಿಕೆಟ್ ಮಂಡಳಿಯ ನಿಯಮವಾಗಿದ್ದು, ರವಿ ಶಾಸ್ತ್ರಿ ಹಾಗೂ ಸಂದೀಪ್ ಪಾಟೀಲ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.