Apple ಸಂಸ್ಥೆಯ ವಾರ್ಷಿಕ ಡೆವಲಪರ್ಸ್ ಕಾನ್ಫರೆನ್ಸ್ WWDC 2016 ಸೋಮವಾರ ನಡೆಯುತ್ತಿದೆ. ಇದು ಪ್ರತಿ ವರ್ಷ ಟೆಕ್ ಕ್ಯಾಲಂಡರ್ನ ಅತೀ ಪ್ರಮುಖ ದಿನವೆಂದೇ ಪರಿಗಣಿತವಾಗಿದೆ. ಆದರೆ ಈ ಬಾರಿಯ ವಿಶೇಷವೆಂದರೆ ಈ ವಾರ್ಷಿಕ ಕಾನ್ಫರೆನ್ಸ್ನಲ್ಲಿ ಅತೀ ಕಿರಿಯ ಡೆವಲಪರ್ ಆಗಿ 9 ವರ್ಷದ ಭಾರತಿಯ ಬಾಲಕಿ ಅನ್ವಿತ ಬೋಸ್ ಭಾಗವಹಿಸಿರುವುದು.
ತನ್ನ ಕ್ರೆಡಿಟ್ನಲ್ಲಿ ಹಲವಾರು ಐಒಎಸ್ appಗಳನ್ನು ಹೊಂದಿರುವ ಅನ್ವಿತಾಳ ಆಸೆ WWDC 2016ಗೆ ತೆರಳಿ, apple ಸಂಸ್ಥಾಪಕ ಟಿಮ್ ಕುಕ್ ಅವರನ್ನು ಭೇಟಿಯಾಗುವುದು. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಈಕೆ ಕಾನ್ಫರೆನ್ಸ್ಗೆ ತೆರಳುವುದಕ್ಕಾಗಿ ಸ್ಕಾಲರ್ಶಿಪ್ಗೆ ಅರ್ಜಿ ಹಾಕಿದ್ದಳು, ಆಕೆಯನ್ನು ಸೆಲೆಕ್ಟ್ ಮಾಡಿರುವ ಆ್ಯಪಲ್ ಅವಳ ಕನಸನ್ನು ನನಸಾಗಿಸಿದೆ.
350 ಮಂದಿ ಸ್ಕಾಲರ್ಶಿಪ್ ಪಡೆದಿದ್ದು, ಅದರಲ್ಲಿ 120 ಮಂದಿ 18 ವರ್ಷಕ್ಕಿಂತ ಕೆಳಗಿನವರು. ಶೇ.22ರಷ್ಟು ಮಂದಿ ಮಹಿಳೆಯರು. ತನ್ನ ಡೆವಲಪರ್ಸ್ ಕಾರ್ಯಕ್ರಮಕ್ಕೆ ವೈವಿಧ್ಯತೆಯನ್ನು ಬೆರೆಸಲೆಂದೇ ಈ ಆಯ್ಕೆಗಳನ್ನು ಆ್ಯಪಲ್ ಮಾಡಿದೆ.
ಯಾವುದೇ ತರಬೇತಿ ಇಲ್ಲದೆಯೇ ಅನ್ವಿತಾ ಮೊಬೈಲ್ app ಡೆವಲಪ್ ಮಾಡ ಹೊರಟವಳು, ಯುಟ್ಯೂಬ್ ಟ್ಯುಟೋರಿಯಲ್ ವೀಕ್ಷಿಸಿ ಆಕೆ ಕೋಡಿಂಗ್ ಕಲಿತವಳು. ಕೋಡಿಂಗ್ ಅತೀ ಕಷ್ಟಕರ ಎನ್ನುವ ಈಕೆ, ನಾನು ಅದಕ್ಕೆ ಒಗ್ಗಿಕೊಂಡಿರುವುದು ನನಗೆ ಸಂತಸ ತಂದಿದೆ ಎನ್ನುತ್ತಾಳೆ.
ಆಕೆಯ Smartkins Animals app ಮಕ್ಕಳಿಗೆ ಪ್ರಾಣಿಗಳ ಶಬ್ದ ಮತ್ತು ಹೆಸರುಗಳ ಬಗ್ಗೆ ತಿಳಿಸುತ್ತದೆ. ಇದೇ ತರನಾದ ಹಲವಾರು app ಡೆವಲಪ್ ಮಾಡಿದ ಕೀರ್ತಿ ಆಕೆಯದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.