ಸಿದ್ಧಕಟ್ಟೆ : ’ರಂಜನೆ, ಮಾಹಿತಿಗಾಗಿ ಇಂದು ಹಲವು ಮಾಧ್ಯಮಗಳು ಇವೆ. ಆದರೆ ಇವು ಯಾವುದೂ ಪುಸ್ತಕಕ್ಕೆ ಪರ್ಯಾಯವಲ್ಲ. ಓದು ಎಂಬುದು ಒಂದು ಬಗೆಯ ಸುಖ ಪಯಾಣ. ಅರಿವು ಹಾಗೂ ಕಲ್ಪನಾ ಸಮರ್ಥವನ್ನು ವೃದ್ಧಿಸುತ್ತದೆ. ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಕನ್ನಡ ಉಪಾನ್ಯಾಸಕ ಡಾ|| ಯೋಗಿಸ್ ಕೈರೋಡಿ ತಿಳಿಸಿದರು.
ಅವರು ನಿತ್ಯಾನಂದ ಶೆಟ್ಟಿ ಮಾವಿನಕಟ್ಟೆ (ನಿತ್ಯ ರತ್ನಗಿರಿ) ಯವರ ಸಿದ್ಧಕಟ್ಟೆಯಲ್ಲಿ ನಡೆದ ಮೌನಗೌರಿಯ ಮೌನರಾಗ ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತಾನಾಡಿದರು.
ಸುತ್ತಲಿನ ಸಮಾಜ ಮತ್ತು ನಿಸರ್ಗವನ್ನು ಬೆರಗು ಕಣ್ಣಿನಿಂದ ನೋಡಬೇಕು. ಇತರರ ಬರಹಗಳನ್ನು ಓದುತ್ತಾ ಬರಹ ಬಲಗೊಳುತ್ತದೆ ಎಂದರು.
ಕೃತಿ ಬಿಡುಗಡೆ ಮಾಡಿದ ಸಿದ್ಧಕಟ್ಟೆ ರೋಟರಿ ಸಮುದಾಯಗಳ ಅಧ್ಯಕ್ಷ ವೈದ್ಯ ಡಾ|| ಕೃಷ್ಣಮೂರ್ತಿ ಮಾತಾನಾಡಿ ಒಳ್ಳೆಯ ಹವ್ಯಾಸಗಳು ಆರೋಗ್ಯಕರ ವ್ಯಕ್ತಿ ಹಾಗೂ ಸಮಾಜವನ್ನು ರೂಪಿಸುತ್ತದೆ ಎಂದರು. ನಿವೃತ್ತ ಕಂದಾಯ ಅಧಿಕಾರಿ, ಹವ್ಯಾಸಿ ಜಲ ತಜ್ಞ ಭೋಜ.ಕೆ ಶುಭ ಹಾರೈಸಿದರು. ಕವಿ ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಸತೀಶ್ ಕೊಯಿಲ ಸಹಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.