ವಾಷಿಂಗ್ಟನ್: ದಕ್ಷಣ ಏಷ್ಯಾದಲ್ಲಿ ಪರಮಾಣು ಮತ್ತು ಕ್ಷಿಪಣಿ ಅಭಿವೃದ್ಧಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೇರಿಕಾ, ಭಾರತ ಮತ್ತು ಪಾಕಿಸ್ಥಾನದ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಕರೆ ನೀಡಿದೆ.
ಭಧ್ರತಾ ಸವಾಲು, ಶಸ್ತಾಸ್ತ್ರ ದಾಸ್ತಾನು, ಭಾರತ-ಪಾಕ್ ನಡುವಿನ ಸಾಂಪ್ರದಾಯಿಕ ಸಂಘರ್ಷದಲ್ಲಿ ಅಣ್ವಸ್ತ್ರ ಬಳಕೆ ಮತ್ತಿತರ ಅಪಾಯಗಳ ಬಗ್ಗೆ ಅದು ಕಳವಳ ವ್ಯಕ್ತಪಡಿಸಿದೆ ಎಂದು ಅಮೇರಿಕ ರಾಜ್ಯಗಳ ಇಲಾಖೆ ವತಾರರು ತಿಳಿಸಿದ್ದಾರೆ.
ಎರಡೂ ನೆರೆ ರಾಷ್ಟ್ರಗಳ ನಡುವೆ ನಿರಂತರ ಮತ್ತು ಚೇತರಿಕೆಯ ಮಾತುಕತೆ ಪ್ರಕ್ರಿಯೆ ಮುಖ್ಯ. ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಸುಧಾರಣೆ ಹೆಚ್ಚಿದಲ್ಲಿ ಭವಿಷ್ಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ಹೆಚ್ಚಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.