ವಾಷಿಂಗ್ಟನ್ : ಪಾಕಿಸ್ಥಾನಕ್ಕೆ ಅಣ್ವಸ್ತ್ರ ತಂತ್ರಜ್ಞಾನಗಳನ್ನು ಚೀನಾ ನೀಡುತ್ತಿದ್ದು, ಇದರಿಂದ ಅಮೇರಿಕ ಮತ್ತು ಭಾರತಕ್ಕೆ ಆತಂಕ ಎದುರಾಗಿದೆ ಎಂದು ಅಮೆರಿಕ ಸಂಸದರು ಬರಾಕ್ ಒಬಾಮ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ಥಾನಕ್ಕೆ ಚೀನಾ ಕ್ಷಿಪಣಿ ಉಡಾಹಕಗಳನ್ನು ಪೂರೈಸಿದ್ದು, ಇದು ರಷ್ಯಾದ ಎಂಎಝಡ್ 543 ಮತ್ತು ಎಂಎಝಡ್ 7310 ಗೆ ಇರುವ ಸಾಮರ್ಥ್ಯಕ್ಕೆ ಸಮವಾಗಿದೆ. ಅಲ್ಲದೇ ಪಾಕಿಸ್ಥಾನ ಈ ಉಡಾಹಕಗಳನ್ನು ಬಳಸಿ 2015 ರಲ್ಲಿ ಖಂಡಾತರ ಕ್ಷಿಪಣಿ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.
ಪಾಕ್ ಮತ್ತು ಚೀನಾದ ಈ ನಡೆಯಿಂದ ಏಷ್ಯಾದ ದೇಶಗಳಿಗೆ ಆತಂಕ ಹೆಚ್ಚಾಗಿದ್ದು, ದಕ್ಷಿಣ ಏಷ್ಯಾ ಮತ್ತು ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಪಾಕ್ ಹೊಂದಿದೆ ಎನ್ನಲಾಗುತ್ತಿದೆ.
ಒಂದೆಡೆ ಪಾಕಿಸ್ಥಾನದ ಭಯೋತ್ಪಾದನೆಗೆ ವಿರೋಧ ವ್ಯಕ್ತಪಡಿಸಲು ಚೀನಾ ಹಿಂಜರಿಯುತ್ತಿದ್ದು, ಭಾರತವನ್ನು ಎನ್.ಎಸ್.ಜಿ. ರಾಷ್ಟ್ರಗಳ ಪಟ್ಟಿಗೆ ಸೇರಲು ಅಡ್ಡಗಾಲಿಡುತ್ತಿದೆ. ಈ ಮೂಲಕ ಪಾಕ್ ಪ್ರೇರಿತ ಭಯೋತ್ಪಾದನೆಗೆ ಚೀನಾ ಆತಂರಿಕ ಬೆಂಬಲ ನೀಡುತ್ತಿದೆಯೇ ಎಂಬ ಅನುಮಾನ ಮೂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.