ರಾಯ್ಗರ್ : ಆರ್.ಎಸ್.ಎಸ್. ಪ್ರಚಾರಕ ಮತ್ತು ಮಾಜೀ ಕಾರ್ಯಕರ್ತರಾದ ಸೀತಾರಾಮ ಕೆದಿಲಾಯ ಅವರ ನೇತೃತ್ವದ ಭಾರತ ಪರಿಕ್ರಮ ಯಾತ್ರೆ ಮೇ 25ರಂದು ಛತ್ತೀಸ್ಗಢವನ್ನು ಪ್ರವೇಶಿಸಿದೆ.
ಛತ್ತೀಸ್ಗಢ ರಾಜ್ಯವನ್ನು ಪ್ರವೇಶಿಸುವ ಮೂಲಕ ಭಾರತ ಪರಿಕ್ರಮಯಾತ್ರೆ 21 ನೇ ರಾಜ್ಯವನ್ನು ಪ್ರವೇಶಿಸಿದಂತಾಗಿದೆ. ಈ ಯಾತ್ರೆಯು ಒಡಿಸ್ಸಾದ ಭರಗಡ್ ಜಿಲ್ಲೆಯ ಮೂಲಕ ಛತ್ತೀಸ್ಗಢ ದ ರಾಯಗರ್ ಜಿಲ್ಲೆಯನ್ನು ಪ್ರವೇಶಿಸಿದೆ.
ಭಾರತ ಪರಿಕ್ರಮ ಯಾತ್ರೆ 5 ವರ್ಷಗಳ ಕಾಲ ಪಾದಯಾತ್ರೆ ಮೂಲಕ ದೇಶದಾದ್ಯಂತ ಸಂಚರಿಸಲಿದೆ. ಈ ಯಾತ್ರೆಯು ಪ್ರಸ್ತುತ 1387 ದಿನ ಮತ್ತು 19,000 ಕಿ.ಮಿ. ಪೂರೈಸಿದೆ. ಈ ಯಾತ್ರೆಯು 9 ಜುಲೈ 2017 ರಂದು ಗುರುಪೂರ್ಣಿಮೆಯ ದಿನ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.