ಮಂಗಳೂರು : ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್ಲೈನ್ನ ತುಳು ಚಲನ ಚಿತ್ರ ಮೇ 14ರಂದು ಮಂಗಳೂರಿನಲ್ಲಿ ಪ್ರಭಾತ್ ಟಾಕೀಸ್ನಲ್ಲಿ 100 ದಿನಗಳನ್ನು ಪೂರೈಸಿದ್ದು ಇದರ ಸಂಭ್ರಮಾಚರಣೆ ಮೇ22ರಂದು ಮಂಗಳೂರಿನ ದೀಪ ಕಂಪರ್ಟ್ನಲ್ಲಿ ಜರಗಲಿದೆ. ಫೆಬ್ರವರಿ 5 ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಯಶಸ್ವೀ ಪ್ರದರ್ಶನ ಕಂಡ ಪವಿತ್ರ ಸಿನಿಮಾ 2016 ರ ಸಾಲಿನಲ್ಲಿ 100 ದಿನಗಳನ್ನು ಪೂರೈಸಿದ ಪ್ರಥಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಾಗವೆಂಕಟೇಶ್ ನಿರ್ದೇಶನದಲ್ಲಿ ಹೊರಬಂದಿರುವ ಪವಿತ್ರಕ್ಕೆ ಖ್ಯಾತ ಛಾಯಾಗ್ರಾಹಕ ಜೆ.ಬಿ.ಕೃಷ್ಣ ಅವರ ಕೆಮರಾ ಸಹಾಯವಿತ್ತು. ಚಿತ್ರದ ನಿರ್ಮಾಪಕ ಅನಂತರಾಮರಾವ್ ಮೂಲತಃ ಎರ್ಮಾಳ್ನವರಾಗಿದ್ದು ಅವರು ಚೆನ್ನೈನಲ್ಲಿ ನೆಲೆಸಿದ್ದಾರೆ. ತುಳು ಭಾಷೆಯ ಅಭಿಮಾನದ ಮೇಲೆ ಅವರೇ ಕಥೆಯೊಂದನ್ನು ಸಿದ್ಧಪಡಿಸಿ ಸಿನಿಮಾ ನಿರ್ಮಿಸಿದ್ದಾರೆ. ಚೆನ್ನೈಯಲ್ಲಿ ಹೊಟೇಲ್ ಉದ್ಯಮದೊಂದಿಗೆ ಅಲ್ಲಿಯ ಚಿತ್ರರಂಗದ ಬಗ್ಗೆ ಸತತ ಸಂಪರ್ಕ ಇರಿಸಿದವರು. ಅನಂತರಾಮರಾವ್ ಈ ಹಿಂದೆ ಕನ್ನಡದಲ್ಲಿ ರಾಜ್ ಕುಮಾರ್ ನಾಯಕತ್ವದಲ್ಲಿ ಎರಡು ಚಿತ್ರ ನಿರ್ಮಿಸಿದ್ದರು. ಅಲ್ಲದೆ ತಮಿಳಿನಲ್ಲೂ ಅವರು ಚಿತ್ರ ನಿರ್ಮಿಸಿದ್ದಾರೆ. ಇದೀಗ ಮತ್ತೊಂದು ತುಳು ಸಿನಿಮಾವನ್ನು ನಿರ್ಮಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಹೊಸ ಚಿತ್ರಕ್ಕೂ ಅವರೇ ಕತೆ, ಚಿತ್ರಕಥೆ ಸಿದ್ದಪಡಿಸಿದ್ದಾರೆ.
ಪವಿತ್ರ ಸಿನಿಮಾದ ಮೂಲಕ ಚಿರಶ್ರೀ ಅಂಚನ್ ಎಂಬ ನವನಟಿಯನ್ನು ಚಿತ್ರರಂಗಕ್ಕೆ ಅನಂತರಾಮರಾವ್ ಪರಿಚಯಿಸಿದ್ದು, ಆಕೆಗೆ ಈಗ ಕನ್ನಡ, ತಮಿಳು, ತೆಲುಗಿನಲ್ಲಿ ಅವಕಾಶಗಳು ದೊರೆತಿವೆ. ಪವಿತ್ರದಲ್ಲಿ ತುಳುರಂಗಭೂಮಿಯ ಅನೇಕ ಕಲಾವಿದರು ಕೂಡಾ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟರಾಗಿ ಶ್ರವಂತ್ ಮತ್ತು ವಸಂತ ಅಭಿನಯಿಸಿದ್ದಾರೆ. ಪವಿತ್ರ ಸಿನಿಮಾ 100 ದಿನಗಳನ್ನು ಪೂರೈಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸುವ ಅನಂತರಾಮ ರಾವ್ ಅವರು ತನ್ನ ಹೊಸ ಚಿತ್ರದಲ್ಲಿ ಹಾಸ್ಯ, ಲವ್, ಫೈಟಿಂಗ್ ಎಲ್ಲವೂ ಇದೆ. ಕೋಸ್ಟಲ್ವುಡ್ ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದ್ದೇನೆ ಅವರಿಗೆ ಇಷ್ಟವಾಗುವಂತಹ ಸಿನಿಮಾ ಮಾಡುತ್ತೇನೆ ಎನ್ನುತ್ತಾರೆ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.