ಬೆಂಗಳೂರು : ಬಿಬಿಎಂಪಿ ವಿಭಜನೆ ಮಸೂದೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ರಾಜ್ಯಸರಕಾರದಿಂದ ಕೆಲವೊಂದು ಸ್ಪಷ್ಟನೆಗಳನ್ನು ಕೋರಿದ್ದಾರೆ.
ಬಿಬಿಎಂಪಿ ವಿಭನೆಗಾಗಿ ಸರಕಾರ ಬಿಗಿ ಪಟ್ಟುಹಿಡಿದಿದ್ದು, ಕೋರ್ಟ್ ಮೆಟ್ಟಲೇರಿತ್ತು. ಈ ಸಂದರ್ಭ ಕೋರ್ಟ್ ವಿಭಜನೆಗೆ ಸಮಯ ತಗಲುವ ಕಾರಣ ಪೌರಾಡಳಿತ ಸಂಸಂಸ್ಥೆಗಳಿಗೆ ಸಮಯಕ್ಕೆ ಸರಯಾಗಿ ಚುನಾವಣೆ ನಡೆಸಲು ಸೂಚಿಸಿತು. ಅಲ್ಲದೇ ಇಂತಹ ವಿಭಜನೆ ಚುನಾವಣೆ ಸಮಯಕ್ಕಿಂತ ಮಾಡತಕ್ಕದ್ದು, ಅಲ್ಲದೆ ಹೀಗೆ ವಿಭಾಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದಿತ್ತು.
ಸರಕಾರ ಈ ಕಾರಣದಿಂದ ಕರ್ನಾಟಕ ಪುರಸಭೆಯನ್ನು (ತಿದ್ದುಪಡಿ) ಮಸೂದೆಯನ್ನು ಮಂಡಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದು, ಇದನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದ್ದಾರೆ. ಈಗ ರಾಷ್ಟ್ರಪತಿಗಳು ರಾಜ್ಯಸರಕಾರದಿಂದ ಇದರಿಂದ ಆಗುವ ಪರಿಣಾಮಗಳ ಬಗ್ಗೆ ಸ್ಪಷ್ಟನೀಡುವಂತೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.